Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಮನೆಗೆ ಬಂದ ಮುಸುಕುಧಾರಿ ವ್ಯಕ್ತಿ ಮಲಗಿದ್ದ ಮಗು ಎತ್ತಿಕೊಂಡು ಪರಾರಿಯಾದ ಘಟನೆ: ಮಗವಿನ ಮೃತದೇಹ ಹೊಳೆಯಲ್ಲಿ ಪತ್ತೆ

ಉಡುಪಿ: ಮುಸುಕು ಹಾಕಿಕೊಂಡು ಬಂದ ವ್ಯಕ್ತಿಯೊಬ್ಬ ಮನೆಯಲ್ಲಿ ಮಲಗಿದ್ದ 1 ವರ್ಷದ ಮಗುವನ್ನು ಎತ್ತಿಕೊಂಡು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎಡಮೊಗ್ಗೆ ಗ್ರಾಮದ ಕುಮಟಿ ಬೇರು ಎಂಬಲ್ಲಿಂದ ವರದಿಯಾಗಿತ್ತು.

ಗುರುವಾರ ಬೆಳಗ್ಗೆ ಮನೆಗೆ ನುಗ್ಗಿದ ಆಗಂತುಕ ಸಾನ್ವಿತಾ ನಾಯಕ್ ಎಂಬ 1 ವರ್ಷದ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಪರಾರಿಯಾಗಿದ್ದಾನೆ, ಕುಬ್ಜಾ ನದಿಯ ಮೂಲಕ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ಮಗುವಿನ ತಾಯಿ ರೇಖಾ ಆರೋಪಿಸಿದ್ದರು.

ಮನೆಯಲ್ಲಿ ಹೆಜ್ಜೆ ಸಪ್ಪಳ ಕೇಳಿ ಎಚ್ಚರಗೊಂಡೆ, ಒಳಗೆ ಬಂದವನೇ ಮಗುವನ್ನು ಎತ್ತಿಕೊಂಡ. ಆ ವೇಳೆ ನಾನು ಪ್ರತಿಭಟಿಸಿದೆ, ಆದರೆ ಆತ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಹೋಗಿಬಿಟ್ಟ. ಬಹು ದೂರದವರೆಗೆ ಆತನನ್ನು ನನ್ನ ಐದು ವರ್ಷಗ ಮಗನ ಜೊತೆ ಹಿಂಬಾಲಿಸಿದೆ, ಆದರೆ ಆತ ಕುಬ್ಜಾ ನದಿಯ ನದಿಗೆ ಜಿಗಿದ, ನಾನು ಕೂಡ ನದಿಗೆ ಹಾರಿದೆ. ಆದರೆ ನೀರಿನ ಹರಿವಿನ ಪ್ರಮಾಣ ಹೆಚ್ಚು ಇದ್ದ ಕಾರಣ ಆತನನ್ನು ಹಿಡಿಯಲಾಗಲಿಲ್ಲ ಎಂದು ಹೇಳಿಕೆ ನೀಡಿದ್ದರು.

ಬಂದ ಆಗಂತುಕ ಏಕೆ ತಮ್ಮ 1 ವರ್ಷದ ಮಗುವನ್ನು ಟಾರ್ಗೆಟ್ ಮಾಡಿದ್ದಾನೆ ಎಂಬುದು ಪೋಷಕರಿಗೆ ಇನ್ನೂ ನಿಗೂಡವಾಗಿದೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

ಘಟನೆಗೆ ಹೊಸ ತಿರುವು: ನಿನ್ನೆ ನಡೆದಿದೆ ಎನ್ನಲಾದ ಮಗು ಅಪಹರಣ ಪ್ರಕರಣಕ್ಕೆ ಇದೀಗ ಹೊಸ ತಿರುವೊ೦ದು ದೊರಕಿದೆ. ಮಗುವನ್ನು ತಾಯಿಯೇ ನದಿಯಲ್ಲಿ ಏಸೆದಿದ್ದಾರೆ೦ಬ ಗ೦ಬೀರ ಆರೋಪವು ಇದೀಗ ಕೇಳಿ ಬರಲಾರ೦ಭಿಸಿದೆ. ಗ೦ಡ-ಹೆ೦ಡತಿಯ ಜಗಳಕ್ಕೆ ತಾಯಿಯೇ ಮಗುವನ್ನು ನದಿಗೆ ಬೀಸಾಡಿ ಮಗುವಿನ ಸಾವಿಗೆ ಕಾರಣಳಾಗಿದ್ದಾಳೆ೦ದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇದೀಗ ತಾಯಿಯನ್ನು ಪೊಲೀಸರು ತಾಯಿಯನ್ನು ವಶಕ್ಕೆ ಪಡೆದುಕೊ೦ಡು ತನಿಖೆಯನ್ನು ನಡೆಸಿದರೆ ಮಾತ್ರ ಸತ್ಯ ಹೊರಬರಬಹುದೆ೦ದು ಹಲವ ಪ್ರಶ್ನೆಯಾಗಿದೆ. ಒಟ್ಟಾರೆ ಇವರ ನಡುವಿನ ಭಿನ್ನಾಭಿಪ್ರಾಯಕ್ಕೆ ಮುಗ್ಧ ಮಗು ಬಲಿಯಾಯಿತಲ್ಲವೇ ಎ೦ದು ಬೇಸರದ ಸ೦ಗತಿ.

ನಿಜಕ್ಕೂ ಆಗಿದ್ದೇನು?
ಅಪಹೃತ ಮಗುವಿನ ತಾಯಿ ಮತ್ತು ಸೋದರನ ಹೇಳಿಕೆಗಳ ವ್ಯತ್ಯಾಸದಿಂದ ಘಟನೆಯ ಬಗ್ಗೆ ಸಂಶಯಗೊಂಡ ಪೊಲೀಸರು ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲೀ ವಿಚಾರ ಹೊರ ಬಂದಿತ್ತು. ಅಸಲಿಗೆ ಮಗು ಅಪರಹರಣ ತಾಯಿ ಹೆಣೆದಿದ್ದ ಕಥೆಯಾಗಿತ್ತು.

ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ತಾಯಿ ರೇಖಾ ಅವರು ಇಬ್ಬರು ಮಕ್ಕಳೊಂದಿಗೆ ಗುರುವಾರ ಮುಂಜಾನೆ ಹತ್ತಿರದ ಕುಬ್ಜಾ ನದಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಈ ವೇಳೆಗೆ ಕಿರಿಯ ಮಗು ಕೈ ಜಾರಿ ಹರಿಯುವ ನದಿಗೆ ಬಿದ್ದಿತ್ತು. ಇದರಿಂದ ಭಯಗೊಂಡ ರೇಖಾ ಅವರು ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಮಗು ‘ಅಪಹರಣದ ಕಥೆ’ ಕಟ್ಟಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಕುಬ್ಜಾ ನದಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರೇಖಾ ಅವರಿಗೆ ಕೌನ್ಸಲಿಂಗ್ ಮಾಡಲಾಗಿದೆ.

ಸ್ಥಳಕ್ಕೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ ಪಿ ದಿನೇಶ್ ಕುಮಾರ್, ಶಂಕರನಾರಾಯಣ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದರು.

No Comments

Leave A Comment