Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಪೆರ್ಡೂರು:ಬಸ್‌ ಮಾಲೀಕ ಕಮ್‌ ಕಂಡಕ್ಟರ್‌ ಬರ್ಬರ ಹತ್ಯೆ

ಉಡುಪಿ: ಪೆರ್ಡೂರಿನ ದೂಪದಕಟ್ಟೆ ಎಂಬಲ್ಲಿ ಖಾಸಗಿ ಸಿಟಿ ಬಸ್ಸೊಂದರ ಮಾಲೀಕನನ್ನು ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಕಂಡಕ್ಟರ್‌ ಆಗಿದ್ದ ಪ್ರಶಾಂತ್‌ ಪೂಜಾರಿ (38) ಹತ್ಯೆಗೀಡಾಗಿದ್ದು, ಹಣಕಾಸು ವಿಚಾರಕ್ಕಾಗಿ ಪರಿಚಿತರೇ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಪ್ರಶಾಂತ್‌ ನಿವಾಸದ ಎದುರೆ ಹತ್ಯೆ ನಡೆದಿದ್ದು, ಭಾರೀ ವಾಗ್ವಾದ ನಡೆಸಿದ ಬಳಿಕ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ. ಪ್ರಶಾಂತ್‌ ಪತ್ನಿ ಬೊಬ್ಬೆ ಕೇಳಿ ಮನೆಯಿಂದ ಹೊರ ಬರುವಷ್ಟರಲ್ಲಿ ದುಷ್ಕರ್ಮಿಗಳು ಬೈಕ್‌ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

 

 

ಹಿರಿಯಡಕ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೆತಾನು ಕೆಲಸ ಮಾಡುತ್ತಿದ್ದ ಬಸ್ಸನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ.

No Comments

Leave A Comment