Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

3 ಮಾಜಿ ಕಾಂಗ್ರೆಸ್‌ ಶಾಸಕರು, ಓರ್ವ BJP ಶಾಸಕ ನಾಳೆ ಶನಿವಾರ ಗೋವಾ ಸಚಿವ ಸಂಪುಟಕ್ಕೆ

ಪಣಜಿ : ಎರಡು ದಿನಗಳ ಹಿಂದೆ ಬಿಜೆಪಿ ಸೇರಿಕೊಂಡ ಮೂವರು ಕಾಂಗ್ರೆಸ್‌ ಬಂಡುಕೋರರು ಸೇರಿದಂತೆ ಗೋವೆಯ ನಾಲ್ವರು ಶಾಸಕರನ್ನು ನಾಳೆ ಶನಿವಾರ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಲಾಗುವುದು ಎಂದು ಮೂಲಗಳು ಇಂದು ಶುಕ್ರವಾರ ತಿಳಿಸಿವೆ.

ಗೋವೆಯ ಹದಿನೈದು ಕಾಂಗ್ರೆಸ್‌ ಶಾಸಕರ ಪೈಕಿ 10 ಮಂದಿ ಶಾಸಕರ, ವಿಪಕ್ಷ ನಾಯಕ ಚಂದ್ರಕಾಂತ್‌ ಕಾವಳೇಕರ್‌ ನೇತೃತ್ವದಲ್ಲಿ ಕಳೆದ ಬುಧವಾರ ಬಿಜೆಪಿ ಸೇರಿದ್ದರು.

ಕಾಂಗ್ರೆಸ್‌ ಪಕ್ಷದಿಂದ ಸಿಡಿದು ಬಂದ ಬಣದ ಸದಸ್ಯರು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಜತೆಗೂಡಿ ದಿಲ್ಲಿಯಲ್ಲಿ ನಿನ್ನೆ ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತು ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು. ಎಲ್ಲ ಶಾಸಕರು ಇಂದು ಶುಕ್ರವಾರ ಗೋವೆಗೆ ಮರಳಿದ್ದಾರೆ.

ಆದರೆ ಗೋವೆಯ ಗಣಿಗಾರಿಕೆ ಕುರಿತು ಇಂದು ಶುಕ್ರವಾರ ಸಂಜೆ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ಸಾವಂತ್‌ ಅವರು ದಿಲ್ಲಿಯಲ್ಲೇ ಉಳಿದುಕೊಂಡಿದ್ದಾರೆ.

No Comments

Leave A Comment