ಬರಪೀಡಿತ ಚೆನ್ನೈಗೆ ರೈಲಿನಲ್ಲಿ 2.5 ಮಿಲಿಯನ್ ಲೀಟರ್ ನೀರು! ಚೆನ್ನೈ: ಭೀಕರ ಬರಗಾಲಕ್ಕೆ ಗುರಿಯಾಗಿರುವ ಚೆನ್ನೈ ನಗರಕ್ಕೆ ವಿಶೇಷ ರೈಲಿನಲ್ಲಿ 2.5 ಮಿಲಿಯನ್ ಲೀಟರ್ ನೀರನ್ನುಸರಬರಾಜು ಮಾಡಲಾಗುತ್ತಿದೆ. ತಮಿಳುನಾಡಿನ ವೆಲ್ಲೂರಿನಿಂದ 50 ವ್ಯಾಗನ್ಗಳಲ್ಲಿ ನೀರನ್ನು ತುಂಬಿಸಿ ಹೊರಟಿರುವ ರೈಲು ಶುಕ್ರವಾರ ಮಧ್ಯಾಹ್ನ ಚೆನ್ನೈಗೆ ತಲುಪಲಿದೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೀರು ತುಂಬಿಸಿಕೊಂಡಿರುವ ವಿಶೇಷ ರೈಲು ವೆಲ್ಲೂರಿನ ಜೋಲಾರ್ ಪೇಟ್ ನಿಲ್ದಾಣದಿಂದ ಬೆಳಗ್ಗೆ ಚೆನ್ನೈನತ್ತ ಹೊರಟಿದೆ ಎಂದು ಎಎನ್ಐ ವರದಿ ಮಾಡಿದೆ. ಪ್ರತೀ ವ್ಯಾಗನ್ನಲ್ಲಿ 50 ಸಾವಿರ ಲೀಟರ್ ನೀರನ್ನು ತುಂಬಿಸಲಾಗಿದೆ. ಚೆನ್ನೈನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಜನಜೀವನ ತೀವ್ರವಾಗಿ ಬಾಧಿತವಾಗಿದೆ. ಕಳೆದ 2 ತಿಂಗಳುಗಳಿಂದ ನೀರಿಗಾಗಿ ಎಲ್ಲೆಡೆ ಪರದಾಟ ಸಾಮಾನ್ಯವಾಗಿದೆ.