Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅಫ್ಘಾನಿಸ್ತಾನ ದಾಳಿ : 20 ಉಗ್ರರ ಹತ್ಯೆ

ಕುಂದುಜ್: ಅಫ್ಘಾನಿಸ್ತಾನದ ಉತ್ತರ ಕುಂದುಜ್‌ ಪ್ರಾಂತ್ಯದಲ್ಲಿ 20 ಉಗ್ರರನ್ನು ಹೊಡೆದುರುಳಿಸಲಾಗಿದೆ.

ಜು.09 ರಂದು ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ತಾಲಿಬಾನ್ ಸಂಘಟನೆಯೊಂದಿಗೆ ನಂಟು ಹೊಂದಿದ್ದು ಸುಮಾರು 20 ಉಗ್ರರನ್ನು ಅಫ್ಘನ್ ಪಡೆಗಳು ಹತ್ಯೆ ಮಾಡಿವೆ ಎಂದು ಸೇನಾ ವಕ್ತಾರ ಗುಲ್ಹಂ ಹಜ್ರತ್ ಕರಿಮಿ ಬುಧವಾರ ಹೇಳಿದ್ದಾರೆ.

ರಾತ್ರಿ ಇಮಾಮ್ ಸಾಹಿಬ್ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದ್ದು ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಅಫ್ಘನ್ ಪಡೆಗಳು ಬಾಂಬ್ ಗಳನ್ನು ಇರಿಸಿದ್ದು ಈ ದಾಳಿಯಲ್ಲಿ 20 ಉಗ್ರರು ಬಲಿಯಾಗದ್ದು 10 ಜನರಿಗೆ ಗಾಯಗಳಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ದಾಳಿ ವೇಳೆ ಭದ್ರತಾ ಸಿಬ್ಬಂದಿಗೆ ತೊಂದರೆಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಅವರು ಮಾಹಿತಿ ನೀಡಲಿಲ್ಲ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಉಗ್ರರು ಅಲ್ಲಿ ನೆಲೆಸಿರುವವರ ಮನೆಗಳನ್ನು ಆಶ್ರಯಿಸಿದ್ದು ಅಫ್ಘನ್ ಪಡೆ ಮತ್ತು ಉಗ್ರರ ನಡುವಿನ ನಿರಂತರ ದಾಳಿಯಿಂದಾಗಿ ಆ ಪ್ರದೇಶದಲ್ಲಿ ನೆಲೆಸಿರುವ ನೂರಾರು ಕುಟುಂಬಗಳು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಬೇಕಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

No Comments

Leave A Comment