Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಅತೃಪ್ತ ಶಾಸಕರನ್ನು ಭೇಟಿ ಮಾಡಲು ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಮುಂಬಯಿ ಪೊಲೀಸರ ವಶಕ್ಕೆ

ಮುಂಬಯಿ: ಅತೃಪ್ತ ಶಾಸಕರನ್ನು ಭೇಟಿ ಮಾಡಲೇಬೇಕೆಂದು ಹಠ ಹಿಡಿದು ಬೆಳಗ್ಗೆಯಿಂದ ಮುಂಬಯಿಯ ಹೋಟೆಲ್ ಮುಂದೆ ಕಾದು ಕುಳಿತಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಮುಂಬಯಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅತೃಪ್ತ ಶಾಸಕರನ್ನು ಭೇಟಿ ಮಾಡಲು ಬೆಳಗ್ಗೆ 8 ಗಂಟೆಯಿಂದ ಡಿಕೆಶಿ ಬಿಗಿ ಪಟ್ಟು ಹಿಡಿದು ರಿನೈಸೆನ್ಸ್ ಹೋಟೆಲ್ ಬಳಿ ಕಾದು ಕುಳಿತಿದ್ದರು, ಹೋಟೆಲ್ ಮುಂಬಾಗ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತಮುತ್ತ ನಿಷೇದಾಜ್ಞೆ ಜಾರಿ ಗೊಳಿಸಿತ್ತು.

 

 

ನಿಷೇದಾಜ್ಞೆಯ ನಡುವೆಯೂ  ಹೋಟೆಲ್ ಮುಂದೆ ಕುಳಿತಿದ್ದ ಶಿವಕುಮಾರ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು, ಹೀಗಾಗಿ ಸಚಿವ ಶಿವಕುಮಾರ್ ಅವರನ್ನು ಮುಂಬಯಿ ಪೊಲೀಸರು ವಶಕ್ಕೆ ಪಡೆದಿದ್ದಾರೆ,

ಕಲಿನಾ ವಿವಿ ವಿಶ್ರಾಂತಿ ಗೃಹಕ್ಕೆ
ಇನ್ನು ಮುಂಬೈ ಪೋಲೀಸರು ವಶಕ್ಕೆ ಪಡೆದಿರುವ ಕರ್ನಾಟಕದ ಸಚಿವ ಡಿಕೆ ಶಿವಕುಮಾರ್ ಮತ್ತು ಇತರೆ ಕಾಂಗ್ರೆಸ್ ಮುಖಂಡರನ್ನು  ಕಲಿನಾ ವಿಶ್ವವಿದ್ಯಾನಿಲಯದ ವಿಶ್ರಾಂತಿ ಗೃಹಕ್ಕೆ ಸ್ಥಳಾಂತರಿಸಲಾಗಿದೆ.
No Comments

Leave A Comment