Log In
BREAKING NEWS >
““““““““‘ಸಮಸ್ತ ಕ್ರೈಸ್ತ ಸಮಾಜ ಬಾ೦ಧವರಿಗೆ ಗುಡ್ ಫ್ರೈಡ್ ಹಬ್ಬದ ಶುಭಾಶಯಗಳು”””””’

ದೇಶದೆಲ್ಲೆಡೆ 110 ಕಡೆಗಳಲ್ಲಿ ಸಿಬಿಐ ಏಕಕಾಲದಲ್ಲಿ ದಾಳಿ

ಹೊಸದಿಲ್ಲಿ : ಸಿಬಿಐ ಅಧಿಕಾರಿಗಳು ಮಂಗಳವಾರ ಏಕಕಾಲಕ್ಕೆ ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 110 ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ಕ್ರಿಮಿನಲ್‌ ಪ್ರಕರಣಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂದಿಸಿ ಈ ದಾಳಿ ನಡೆಸಿದ್ದಾರೆ.

ದೆಹಲಿ, ಭರತ್‌ಪುರ, ಮುಂಬಯಿ, ಚಂಡೀಗಡ, ಜಮ್ಮು, ಶ್ರೀನಗರ, ಪುಣೆ, ಜೈಪುರ, ಗೋವಾ, ಕಾನ್ಪುರ್, ರಾಯ್‌ಪುರ, ಹೈದರಾಬಾದ್‌ , ಮಧುರೈ, ಕೋಲ್ಕತಾ, ರೂರ್ಕೆಲಾ, ರಾಂಚಿ, ಬೊಕಾರೊ, ಲಕ್ನೋ, ಒಡಿಶಾ,, ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ.

ಭ್ರಷ್ಟಾಚಾರ, ಕ್ರಿಮಿನಲ್‌ ಚಟುವಟಿಕೆ ಮತ್ತು ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಗೆ ಸಂಬಂಧಿಸಿ 30 ಪ್ರತ್ಯೇಕ ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿತ್ತು.

ಈ ತಿಂಗಳ ಆರಂಭದಲ್ಲಿ ಸಿಬಿಐ , 13 ಕಂಪೆನಿಗಳು ಮತ್ತು ಬ್ಯಾಂಕ್‌ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿ 1,139 ಕೋಟಿ ರೂಪಾಯಿ ಅಕ್ರಮದ ಕುರಿತಾಗಿ ತನಿಖೆ ನಡೆಸಿದ್ದರು.

No Comments

Leave A Comment