Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಅನರ್ಹಗೊಳಿಸಿದರೂ ಸರಿ, ರಾಜಕೀಯ ನಿವೃತ್ತಿಗೂ ಸಿದ್ಧ ಆದರೆ ರಾಜೀನಾಮೆ ವಾಪಸ್ ಪಡೆಯಲ್ಲ: ಅತೃಪ್ತ ಶಾಸಕರು

ಮುಂಬಯಿ: ಯಾವುದೇ ಕಾರಣಕ್ಕೂ ರಾಜಿನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ, ಒಂದು ವೇಳೆ ಸ್ಪೀಕರ್ ರಾಜಿನಾಮೆ ಅಂಗೀಕರಿಸಿದಿದ್ದರೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಅತೃಪ್ತ ಶಾಸಕರು ಹೇಳಿದ್ದಾರೆ. ಒಂದು ವೇಳೆ ಸ್ಪೀಕರ್ ಕರೆದರೇ ಕೂಡಲೇ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ.

ಮುಂಬಯಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಭೈರತಿ ಬಸವರಾಜ್, ನಾವು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ, ನಾವು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ, ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ.

 

 

ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬರುವ ಮೊದಲಿನಿಂದಲೂ ನಾನು ಕಾಂಗ್ರೆಸ್ ನಲ್ಲಿದ್ದೇನೆ. ಮುಂಬಯಿಗೆ ಆಟವಾಡಲು ಬಂದಿಲ್ಲ, ನಮ್ಮ ಖರ್ಚಿನಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ, ನಾವು ಅಷ್ಟು ಸಮರ್ಥರಿದ್ದೇವೆ, ನಮ್ಮನ್ನು ಇಲ್ಲಿ ಯಾರೂ ಹಿಡಿದಿಟ್ಟಿಲ್ಲ, ನಮಗೆ ನೋವಾಗಿದ್ದರಿಂದ ನಾವು  ರಾಜಿನಾಮೆ ಸಲ್ಲಿಸಿದ್ದೇವೆ, ಒಂದು ವೇಳೆ ಸ್ಪೀಕರ್ ರಾಜಿನಾಮೆ ಅಂಗೀಕರಿಸದಿದ್ದರೇ ರಾಜಕೀಯ ನಿವೃತ್ತಿ ಪಜೆಯುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನೂ ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ಬಣದ ಮತ್ತೊಬ್ಬ ಆಪ್ತ ಶಾಸಕ ಎಸ್.ಟಿ ಸೋಮಶೇಖರ್, ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವವರು  ಮಂತ್ರಿಗಳಾಗಿದ್ದಾರೆ, ನಮಗೂ ಕಾನೂನು ಗೊತ್ತಿದೆ, ನಮ್ಮ ವಿರುದ್ಧ ಒಂದು ನಿಯಮ ಉಲ್ಲಂಘನೆ ಆರೋಪವಿಲ್ಲ ಅನರ್ಹಗೊಳಿಸುವ ಕೆಲಸವನ್ನು ನಾವು ಮಾಡಿಲ್ಲ, ಗನ್ ಪಾಯಿಂಟ್ ಇಟ್ಟು ಯಾರನ್ನೂ ಹೆದರಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು 10 ಜನ ಒಗ್ಗಟ್ಟಿಗಿದ್ದೇವೆ, ನಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆ ಎಲ್ಲರಿಗೂ ತಿಳಿದಿದೆ, ಹೀಗಾಗಿ ನಾವು ರಾಜಿನಾಮೆ ನೀಡಿದ್ದಾಗಿ ಶಾಸಕ ಬಿ.ಸಿ ಪಾಟೀಲ್ ತಿಳಿಸಿದ್ದಾರೆ,  ನಾವ್ಯಾರು ಪಕ್ಷಕ್ಕೆ ರಾಜಿನಾಮೆ ನೀಡಿಲ್ಲ, ಯಾವುದೇ ಕಾರಣಕ್ಕೂ  ರಾಜಿನಾಮೆ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

No Comments

Leave A Comment