Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

“ಯುವಜನಾಂಗದಲ್ಲಿ ವಿದ್ಯಾರ್ಥಿ ಜೀವನವು ಸುವರ್ಣಯುಗವಿದ್ದಂತೆ”- ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಣಿಪಾಲ:ವಿದ್ಯಾರ್ಥಿಗಳ ಮುಖ್ಯವಾದ ಕರ್ತವ್ಯವೆಂದರೆ ವಿದ್ಯಾಭ್ಯಾಸ ಮಾಡುವುದು. ವೇಳೆಯನ್ನು ವ್ಯರ್ಥವಾಗಿ ಹಾಳು ಮಾಡದೆ ಶಿಸ್ತಿನಿಂದ ಅಭ್ಯಾಸ ಮಾಡುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರು (ನೈಋತ್ಯ ಶಿಕ್ಷಕರ ಕ್ಷೇತ್ರ ಕರ್ನಾಟಕ) ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಅವರು ಮಾಧವ ಕೃಪಾ ಶಾಲೆಯ 2019-20 ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ಕಷ್ಟಪಡದೆ ಪಾಂಡಿತ್ಯವನ್ನು ಸಂಪಾದಿಸುವುದು ಸಾಧ್ಯವಿಲ್ಲ. ಸತತವಾಗಿ ಪರಿಶ್ರಮ ಪಡೆಯದೆ ಯಾವ ವಿಷಯವೂ ಕೈವಶವಾಗುವುದಿಲ್ಲ” ಎಂದು ಹೇಳಿದರು.

ಪ್ರಾಂಶುಪಾಲೆ ಶ್ರೀಮತಿ ಜೆಸ್ಸಿ ಆ್ಯಂಡ್ರ್ಸೂಸ್‍ರವರು ವಿದ್ಯಾರ್ಥಿ ನಾಯಕ ಮಿಥುನ್ ಬಿ. ನಾಯರ್ ನೇತೃತ್ವದ ಶಾಲಾ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇವೆಂದು ಪ್ರಮಾಣವಚನ ಮಾಡಿದರು.

ಈ ಸಂದರ್ಭದಲ್ಲಿ ಪ್ರಸಕ್ತಸಾಲಿನ ಶಾಲಾ ವಾರ್ಷಿಕ ಸಂಚಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಅಂತರ್‍ಶಾಲಾ ಮಟ್ಟದ ಒಲಿಂಪಿಯಾಡ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ಹಾಗೂ ನಗದು ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು.
ಎಸ್. ಒ. ಎಫ್( ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್) ಇದರ ವತಿಯಿಂದ ನೀಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ಶ್ರೀಮತಿ ಪಲ್ಲವಿ ಇವರನ್ನು ಗೌರವಿಸಲಾಯಿತು. ಶ್ಯಾರೆಲ್ ಸಿ ರೊಡ್ರಿಗಸ್ ಸ್ವಾಗತಿಸಿದರು.

ಶ್ರೀಯಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಚಾಲಕರಾದ ಪಿ.ಜಿ.ಪಂಡಿತ್, ಪ್ರಾಂಶುಪಾಲರಾದ ಶ್ರೀಮತಿ ಜೆಸ್ಸಿ ಆಂಡ್ರ್ಯೂಸ್, ಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಸಂತೋಷ್, ಶ್ರೀಮತಿ ಶಕಿಲಾಕ್ಷಿ ಕೃಷ್ಣ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಆಶಾ ನಾಯಕ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಶರ್ಲಿನ್ ಸ್ಯಾಂಡ್ರಾ ಹಾಗೂ ಪ್ರಶಾಂತ್‍ಕಾರ್ಯಕ್ರಮ ಸಂಘಟಿಸಿದರು.

No Comments

Leave A Comment