Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಚಂದ್ರಯಾನ ಯಶಸ್ಸಿಗೆ ಪ್ರಾರ್ಥನೆ ಶ್ರೀಕೃಷ್ಣ ಮಠ, ಕೊಲ್ಲೂರಿಗೆ ಇಸ್ರೋ ಅಧ್ಯಕ್ಷರ ಭೇಟಿ

ಉಡುಪಿ/ ಕೊಲ್ಲೂರು: ಇಸ್ರೋ ಅಧ್ಯಕ್ಷ ಡಾ| ಕೆ. ಶಿವನ್‌ ಅವರು ಕುಟುಂಬ ಸಮೇತರಾಗಿ ರವಿವಾರ ಉಡುಪಿ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.

ಜು. 15ರಂದು ನಡೆಯಲಿರುವ ಚಂದ್ರಯಾನದ ಯಶಸ್ಸಿಗಾಗಿ ಕೃಷ್ಣ ಮಠದಲ್ಲಿ ಶ್ರೀಕೃಷ್ಣನ ಎದುರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು ಬಳಿಕ ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

ಕೊಲ್ಲೂರಿನಲ್ಲಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇಸ್ರೋದ ನಾಲ್ವರು ಸದಸ್ಯರು ಜತೆಗಿದ್ದರು. ದೇಗುಲದ ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪನ ಸಮಿತಿಯ ಸದಸ್ಯ ನರಸಿಂಹ ಹಳಗೇರಿ, ಅರ್ಚಕ ಡಾ| ಕೆ.ಎನ್‌. ನರಸಿಂಹ ಅಡಿಗ ಅವರು ಡಾ| ಕೆ. ಶಿವನ್‌ ಅವರನ್ನು ಸ್ವಾಗತಿಸಿ ಗೌರವಿಸಿದರು.

No Comments

Leave A Comment