Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಖ್ಯಾತ ನೃತ್ಯಗಾತಿ ಸಪ್ನಾ ಚೌಧರಿ ಬಿಜೆಪಿ ಸೇರ್ಪಡೆ

ಹೊಸದಿಲ್ಲಿ : ಖ್ಯಾತ ನೃತ್ಯಗಾತಿ ಸಪ್ನಾ ಚೌಧರಿ ಅವರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ಸದಸ್ಯತ್ವ ಆಂದೋಲನದ ವೇಳೆ ಕೇಂದ್ರ ಸಚಿವ ಹರ್ಷವರ್ಧನ್‌, ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತುದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಅವರ ಸಮ್ಮುಖದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಸಪ್ನಾ ಅವರು ಮನೋಜ್‌ ತಿವಾರಿ ಅವರ ಪ್ರಚಾರ ಪ್ರಚಾರ ಮಾಡಿದ್ದರು.

ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಸಪ್ನಾ ಮನೋಜ್‌ ತಿವಾರಿ ಅವರು ನನ್ನನ್ನು ಪಕ್ಷಕ್ಕೆ ಕರೆದಿದ್ದರು. ಅವರು ನನ್ನ ಉತ್ತಮ ಗೆಳೆಯ ಎಂದರು.

ಸ್ಟೇಜ್‌ಗಳಲ್ಲಿ ಮಾದಕ ನೃತ್ಯಗಳ ಮೂಲಕ ಪ್ರಖ್ಯಾತಿ ಪಡೆದಿರುವ ನೃತ್ಯಗಾತಿ ಸಪ್ನಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

No Comments

Leave A Comment