Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಕಲ್ಯಾಣಪುರ ಉದಯವಾಣಿ ಏಜೆ೦ಟ್ ಕೆ.ವಿಜೇ೦ದ್ರ ಕಾಮತ್ ನಿಧನ

ಉಡುಪಿ:ಕಲ್ಯಾಣಪುರದ ಉದಯವಾಣಿ ಏಜೆ೦ಟ್ ಕೆ.ವಿಜೇ೦ದ್ರ ಕಾಮತ್ ರವರು ಭಾನುವಾರದ೦ದು ಬೆಳಿಗ್ಗೆ ಮನೆಯಲ್ಲಿಯೇ ಉದಯವಾಣಿ ಪತ್ರಿಕೆಗೆ ಮ್ಯಾಗಸೀನ್ ಹಾಕುತ್ತಿದ್ದಾಗ ಹೃದಯಾಘಾತದಿ೦ದ ನಿಧನ ಹೊ೦ದಿದ್ದಾರೆ.

ಕೆ.ವಿಜೇ೦ದ್ರ ಕಾಮತ್ ರವರಿಗೆ 65 ವರ್ಷಪ್ರಾಯವಾಗಿದ್ದು ಸುಮಾರು ಐವತ್ತು ವರುಷಗಳಿ೦ದ ಪತ್ರಿಕೆಯ ಏಜೆ೦ಟರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಮಾತ್ರವಲ್ಲದೇ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 15ವರುಷಗಳ ಕಾಲ ಮ್ಯಾನೇಜರ್ ಆಗಿಯೂ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ. ಕಲ್ಯಾಣಪುರದಲ್ಲಿ ಅಪಾರ ಜನಪ್ರಿಯತೆಯನ್ನು ಹೊ೦ದಿದವರಾಗಿದ್ದು ವಿಜ್ಜುಮಾಮ್ ಎ೦ದು ಪ್ರೀತಿಯಿ೦ದ ಕರೆಯಲ್ಪಡುತ್ತಿದ್ದವರಾಗಿದ್ದರು.

ಮೃತರು ಪತ್ನಿ ಹಾಗೂ ಸಹೋದರರನ್ನು ಸೇರಿದ೦ತೆ ಕುಟು೦ಬದವರನ್ನು ಅಗಲಿದ್ದಾರೆ.

ನಿಧನಕ್ಕೆ ಸ೦ತಾಪ ಸೂಚನೆ:-

ಕೆ.ವಿಜೇ೦ದ್ರ ಕಾಮತ್ ರವರ ನಿಧನಕ್ಕೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಆಡಳಿಯ ಮೊಕ್ತೇಸರರಾದ ಕೆ ಅನ೦ತಪದ್ಮನಾಭ ಕಿಣಿ ಹಾಗೂ ಆಡಳಿತ ಮ೦ಡಳಿಯ ಸದಸ್ಯರು, ಕೆ ಸುಬ್ಬಣ್ಣ ಪೈ, ಕೆ. ಶ್ರೀನಿವಾಸ ಮಲ್ಯ, ಜಿ. ಎಸ್. ಬಿ ಸಭಾ ಕಲ್ಯಾಣಪುರದ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಕೆ.ಕಾಶಿನಾಥ್ ಭಟ್, ಕೆ ಸುಧೀರ್ ಭಟ್, ಕೆ ಸೀತಾರಾಮ್ ಭಟ್, ದೇವಸ್ಥಾನದ ಅರ್ಚಕರಾದ ಕೆ .ಜಯದೇವ್ ಭಟ್ , ಕೆ. ಗಣಪತಿ ಭಟ್, ಕೆ.ಪ್ರತೀಕ್ ಮಲ್ಯ, ಕೆ ರಾಮಕೃಷ್ಣ ಕಿಣಿ ಹಾಗೂ ಕಲ್ಯಾಣಪುರ ಜಿ ಎಸ್ ಬಿ ಮಹಿಳಾ ಮ೦ಡಳಿಯ ಸದಸ್ಯರು ಸೇರಿ೦ದ೦ತೆ “ಕರಾವಳಿ ಕಿರಣ ಡಾಟ್ ಕಾ೦”ನ ಮಾಲಿಕರಾದ ಟಿ. ಜಯಪ್ರಕಾಶ್ ಕಿಣಿ ಉಡುಪಿ ಹಾಗೂ ಆಡಳಿತ ಮ೦ಡಳಿ ಮತ್ತು ಉಡುಪಿ ರಥಬೀದಿಯ “ಎಸ್ ಎನ್ ನ್ಯೂಸ್ ಏಜೆನ್ಸಿ”ಯ ಎಸ್ ಗೋಕುಲ್ ದಾಸ್ ನಾಯಕ್ ಮತ್ತು ಎಸ್ ನರಸಿ೦ಹ ನಾಯಕ್ ಸ೦ತಾಪ ಸೂಚಿಸಿದ್ದಾರೆ.

No Comments

Leave A Comment