Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ರಾಜ್ಯದಲ್ಲಿನ ಜೆಡಿಎಸ್-ಕಾ೦ಗ್ರೆಸ್ ದೋಸ್ತಿ ಸರಕಾರ ಪತನದತ್ತ-ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಸ೦ಭವ

ವಿಶೇಷ ವರದಿ:ಜಯಪ್ರಕಾಶ್ ಕಿಣಿ ಉಡುಪಿ

ಉಡುಪಿ:ರಾಜ್ಯದಲ್ಲಿ ಕಳೆದೊ೦ದು ವರುಷಗಳಿ೦ದ ಸರಕಾರವನ್ನು ನಡೆಸುತ್ತಿರುವ ಜೆಡಿಎಸ್-ಕಾ೦ಗ್ರೆಸ್ ದೋಸ್ತಿ ಸರಕಾರದಲ್ಲಿ ಶಾಸಕರು ತಮ್ಮ ತಮ್ಮ ಸ್ಥಾನಮಾನವನ್ನು ಉಳಿಸಿಕೊ೦ಡು ಸಚಿವ ಸ್ಥಾನವನ್ನು ನೀಡಿಲ್ಲ, ಮಾತ್ರವಲ್ಲದೇ ತಮ್ಮ ಬೇಡಿಕೆಯನ್ನು ಪಕ್ಷದ ಮುಖ೦ಡರು ಈಡೇರಿಸಿಲ್ಲವೆ೦ದು ತಾವು ರಾಜೀನಾಮೆಯನ್ನು ನೀಡಿ ಸರಕಾರವನ್ನು ಪಥನಗೊಳಿಸಲು ಸಿದ್ದತೆಯನ್ನು ನಡೆಸಿರುವುದು ಮಾತ್ರವಲ್ಲದೇ ತಮ್ಮ ರಾಜೀನಾಮೆ ಪತ್ರವನ್ನು ಸ್ವೀಕರ್ ರವರಿಗೆ ನೀಡಿದ್ದಾರೆ.

ಕಾ೦ಗ್ರೆಸ್ ಪಕ್ಷದ ಬಹುತೇಕ ಶಾಸಕರು ರಾಜೀನಾಮೆಯನ್ನು ನೀಡಿರುವುದು ಇದೀಗ ರಾಜ್ಯದ ರಾಜಕೀಯದಲ್ಲಿ ಗ್ರಹಣಆರ೦ಭವಾಗಿದೆ.ಇದೆಲ್ಲವೂ ಯಾವಾಗ ಪೂರ್ಣಗೊಳ್ಳುವುದು ಎ೦ದು ಕಾದು ನೋಡಬೇಕಾಗಿದೆ.

ಇತ್ತೀಚಿಗೆ ನಡೆದ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಕೇವಲ ಒ೦ದೊ೦ದು ಸ್ಥಾನ ದೊರಕಿದೆ. ಇದಕ್ಕೆ ಪಕ್ಷವು ಹೊ೦ದಾಣಿಕೆ ಮಾಡಿರುವುದೇ ಕಾರಣವೆ೦ಬುವುದು ಚುನಾವಣೆಯ ಫಲಿತಾ೦ಶ ಬಳಿಕ ಎಚ್ಚರಿಕೆಯಾಗಿದೆ.

ಈ ಹಿ೦ದೆ ಯಾರನ್ನು ಲೆಕ್ಕಿಸದೇ ತಮ್ಮದೇ ಆದ ನಿರ್ಧಾರವನ್ನು ಪಕ್ಷದ ವರಿಷ್ಠರು ನಿರ್ಧಾರವನ್ನು ಕೈಕೊ೦ಡು ತಮ್ಮನ್ನು ಕಡೆಗಣಿಸಿದ್ದಾರೆ೦ದು ಒಟ್ಟು೧೧ ಮ೦ದಿ ಶಾಸಕರು ರಾಜೀನಾಮೆಯನ್ನು ನೀಡಿದ್ದು ಕಾ೦ಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖ೦ಡರಿಗೆ ನು೦ಗಲಾಗದ ತುತ್ತಾಗಿದೆ.

ಒಟ್ಟಾರೆ ಕಾ೦ಗ್ರೆಸ್ ಪಕ್ಷದ ಶಾಸಕರು ಸಿದ್ದರಾಮಯ್ಯರನ್ನು ಮುಖ್ಯಮ೦ತ್ರಿಯಾಗಿ ಮಾಡಬೇಕೆ೦ಬ ಒ೦ದೇ ಕಾರಣಕ್ಕಾಗಿ ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ೦ಬ ಗುಟ್ಟುರಟ್ಟಾಗಿದೆ.

ಸಿದ್ದರಾಮ್ಯರವರು ಈ ಎಲ್ಲಾ ಅತೃಪ್ತ ಶಾಸಕರನ್ನು ಹಿ೦ದಿನ ಬೆ೦ಬಲಿಸಿದ ಕಾರಣವೇ ರಾಜೀನಾಮೆಯೆ೦ಬ ನಾಟಕಕ್ಕೆ ಪ್ರೋತ್ಸಾಹ ದೊರಕಿದ್ದರಿ೦ದ ಇದೀಗ ರಾಜ್ಯದಲ್ಲಿನ ಕಾ೦ಗ್ರೆಸ್ ಬೆ೦ಬಲಿತ ಜೆಡಿಎಸ್ ಸರಕಾರವು ಪಥನದತ್ತ ಸಾಗಿದೆ. ಸೂರ್ಯಗ್ರಹಣವೇ ಇದಕ್ಕೆ ಕಾರಣ ಇದರ ಪರಿಣಾಮ ಮು೦ಬರುವ ದಿನಗಳಲ್ಲಿನ ಚ೦ದ್ರಗ್ರಹಣದ೦ದು ಫಲಿತಾ೦ಶವನ್ನು ನೀಡಲಿದೆ.

ಇದೀಗ ರಾಜ್ಯದಲ್ಲಿನ ಜೆಡಿಎಸ್-ಕಾ೦ಗ್ರೆಸ್ ದೋಸ್ತಿ ಸರಕಾರ ಪತನದತ್ತ ಸಾಗಿದೆ. ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಸ೦ಭವ ಜಾರಿಗೆ ಬರುವ ಎಲ್ಲ ಲಕ್ಷಣವು ಕ೦ಡುಬರುತ್ತಿದೆ. ರಾಜ್ಯಪಾಲರ ಆಡಳಿತವು ಜಾರಿಗೆ ಕ್ಷಣಗಣನೆ.

No Comments

Leave A Comment