Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅಸ್ಸಾಂ: ಮೆದುಳು ಜ್ವರ ಬಲಿ ಸಂಖ್ಯೆ 49, 190 ಕೇಸುಗಳು ದಾಖಲು: ಆರೋಗ್ಯ ಸಚಿವ

ಗುವಾಹಟಿ : ಅಸ್ಸಾಂ ನಲ್ಲಿ ಇದೇ ಜುಲೈ 5ರ ವರೆಗೆ ಜಪಾನೀಸ್‌ ಎನ್‌ಸೆಫಾಲಿಟೀಸ್‌ (ಮೆದುಳು ಜ್ವರ) ಕಾಯಿಲೆಯಿಂದ 49 ಮಂದಿ ಮೃತಪಟ್ಟಿದ್ದು 190 ಕೇಸುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಮೆದುಳು ಜ್ವರ ಕಾಯಿಲೆ ಸಾಂಕ್ರಾಮಿಕವಾಗುವ ಪರಾಕಾಷ್ಠೆಯ ಕಾಲ ಇದಾಗಿದೆ ಎಂದವರು ಹೇಳಿದ್ದಾರೆ.

ಕೊಕ್ರಝಾರ್‌ ಹೊರತಾಗಿ ಉಳಿದೆಲ್ಲ ಜಿಲ್ಲೆಗಳು ಪ್ರಕೃತ ಈ ಕಾಯಿಲೆಯ ಪ್ರಭಾವಕ್ಕೆ ಒಳಗಾಗಿವೆ. ಹಾಗಿದ್ದರೂ ವ್ಯಾಪಕ ವೈದ್ಯಕೀಯ ತಡೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದವರು ಹೇಳಿದರು.

ಮೆದುಳು ಜ್ವರ ಹರಡುವುದನ್ನು ತಡೆಯುವ ಉಪಕ್ರಮವಾಗಿ ಆರೋಗ್ಯ ಇಲಾಖೆಯ ವಿಚಕ್ಷಣ ಜಾಲದ ಬಹೂದ್ದೇವಿ ಕೆಲಸಗಾರರು, ಮಲೇರಿಯ ತಾಂತ್ರಿಕ ಉಸ್ತುವಾರಿ ಸಿಬಂದಿಗಳು ಮತ್ತು ಸಾಮಾಜಿಕ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು ರಕ್ತದ ಮಾದರಿಗಳನ್ನು ಸಂಗ್ರಹಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಸಚಿವ ಶರ್ಮಾ ಹೇಳಿದರು.

No Comments

Leave A Comment