Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಪರ್ಕಳ: ಅಂಚೆ ನೌಕರ ರವೀಂದ್ರ ನಾಯ್ಕ್ ರಿಗೆ ಸನ್ಮಾನ

ಉಡುಪಿ:”ಸಲ್ಯೂಟ್ ದಿ ಸೈಲೆಂಟ್ ವರ್ಕರ್” ಕಾರ್ಯಕ್ರಮದ ಅಂಗವಾಗಿ ಪರ್ಕಳದ ಅಂಚೆಪೇದೆ ಶ್ರೀಯುತ ರವೀಂದ್ರ ನಾಯ್ಕ್ ರವರನ್ನು ಅವರ ನಿವಾಸದಲ್ಲಿ ಇಂದು ಸನ್ಮಾನಿಸಿ ಗೌರವಿಸಲಾಯಿತು. ಕಳೆದ 26 ವರುಷಗಳಿಂದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಜನರ ಮೆಚ್ಚುಗೆಯನ್ನು ಗಳಿಸಿದವರಾಗಿದ್ದಾರೆ.

ಜೇಸಿಐ ಭಾರತದ ನಿರ್ದೇಶನದಂತೆ ಪರ್ಕಳ ಘಟಕ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಘಟಕಾಧ್ಯಕ್ಷೆ ಜೇಸಿ ವಿನುತಾ, ವಲಯಾಧಿಕಾರಿ ಜೇಸಿ ಆಶಾ, ರಾಷ್ಟೀಯ ತರಬೇತುದಾರ ಮತ್ತು ಪೂರ್ವ ವಲಯ ಉಪಾಧ್ಯಕ್ಷ ಜೇಸಿ ರಾಜೇಶ್ ಡಿ. ಶೆಣೈ , ಪೂರ್ವಾಧ್ಯಕ್ಷ ಜೇಸಿ ನರೇಂದ್ರ ಶೆಟ್ಟಿಗಾರ್ , ಜೇಜೆಸಿ ಸಂಯೋಜಕ ಜೇಸಿ ಸ್ವರಾಜ್ ಶೆಟ್ಟಿ, ಯುವಜೇಸಿ ವಿಭಾಗದ ಅಧ್ಯಕ್ಷೆ ಸಂಯುಕ್ತಾ , ರಮ್ಯಾ ನರೇಂದ್ರ , ರೋಹಿತ್ ಭಾಗವಹಿಸಿದ್ದರು. ಕಾರ್ಯದರ್ಶಿ ಪಲ್ಲವಿ ಆರ್ . ಶೆಣೈ ಧನ್ಯವಾದ ಸಮರ್ಪಿಸಿದರು. ರವೀಂದ್ರ ನಾಯ್ಕ್ ರವರ ಮಾತೃಶ್ರೀ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

No Comments

Leave A Comment