Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಡಿಕೆಶಿ ಸಂಧಾನ ವಿಫಲ, ರಾಜೀನಾಮೆಗೆ ಬದ್ಧ ಎಂದ ಶಾಸಕ ಮುನಿರತ್ನ

ಬೆಂಗಳೂರು: ಕೆಲವು ಅತೃಪ್ತ ಶಾಸಕರ ಮನವೊಲಿಸುವಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿಫಲರಾಗಿದ್ದು, ನಾವು ನೀಡಿರುವ ರಾಜೀನಾಮೆಗೆ ಈಗಲೂ ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಮುನಿರತ್ನ ತಿಳಿಸಿದ್ದಾರೆ.

ಡಿಕೆಶಿ ಜೊತೆ ಸಂಧಾನ ವಿಫಲವಾದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುನಿರತ್ನ, ಹಿರಿಯರಾದ ರಾಮಲಿಂಗಾರೆಡ್ಡಿ ಅವರು ನಮ್ಮ ನಾಯಕರು. ನಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ರೆಡ್ಡಿ ಅವರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು.

ನಾವು ಬೆಂಗಳೂರಿನ ಶಾಸಕರೆಲ್ಲಾ ಒಗ್ಗಟ್ಟಾಗಿದ್ದೇವೆ. ಯಾವುದೇ ವಿಚಾರ ಮಾತನಾಡುವುದಿದ್ದರೂ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡಿ ಎಂದು ಮುನಿರತ್ನ ಹೇಳಿದರು.

 

ನಾವ್ಯಾರು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ, ಕೆಲವು ಸಣ್ಣ, ಪುಟ್ಟ ಬೇಡಿಕೆಗಳಿದ್ದವು. ಸಂಜೆ ವೇಣುಗೋಪಾಲ್ ಅವರು ಬಂದಾಗ ಚರ್ಚಿಸುತ್ತೇವೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

No Comments

Leave A Comment