Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಕೇಂದ್ರ ಬಜೆಟ್ ಮುಖ್ಯಾಂಶ:ಈ ಬಾರಿಯ ಕೇಂದ್ರ ವಿತ್ತೀಯ ಬಜೆಟ್ ನಲ್ಲಿ ಕೆಲವು ವಿಶೇಷತೆ

1:53 pm : 

ನಿರಂತರ 2 ಗಂಟೆ 15 ನಿಮಿಷ ವಿರಾಮವಿಲ್ಲದೆ ಬಜೆಟ್‌ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌.

1:08 pm : 

ಬಂಗಾರದ ಮೇಲಿನ ಆಮದು ಸುಂಕ ಶೇ. 10ರಿಂದ 12.5ಕ್ಕೆ ಏರಿಕೆ.

1:07 pm : 

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 1 ರೂ. ಸೆಸ್ ಏರಿಕೆ

1:05 pm : 

ರಕ್ಷಣಾ ಸಾಮಾಗ್ರಿಗಳಿಗೆ ಕಸ್ಟಮ್ಸ್ ತೆರಿಗೆ ಇಲ್ಲ, ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ವಿನಾಯಿತಿ, ಆಮದಾಗುವ ಪುಸ್ತಕಗಳಿಗೆ ಶೇ, 5 ರಷ್ಟು ತೆರಿಗೆ

1:03 pm : 

ಡಿಜಿಟಲ್‌ ಪೇಮೆಂಟ್‌ ಗೆ ಉತ್ತೇಜನ. ಕ್ರೆಡಿಕ್‌ ಕಾರ್ಡ್‌ ಪೇಮೆಂಟ್‌ಗಳ ಮೇಲೆ ಶುಲ್ಕ ಇಲ್ಲ.

1:02 pm : 

ಮಧ್ಯಮ ವರ್ಗದವರ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ. 7 ಲಕ್ಷದವರೆಗಿನ ಗೃಹ ಸಾಲಕ್ಕೆ 15 ವರ್ಷ ತೆರಿಗೆ ವಿನಾಯಿತಿ.

1:02 pm : 

ತೆರಿಗೆ ಪಾವತಿಗೆ ಇನ್ನು ಪ್ಯಾನ್‌ ಕಾರ್ಡ್‌ ಅಥವಾ ಆಧಾರ್‌ ಕಾರ್ಡ್‌ ಇದ್ದರೆ ಸಾಕು . ಪ್ಯಾನ್‌ ಕಾರ್ಡ್‌ ಕಡ್ಡಾಯವಲ್ಲ. ಐಟಿ ರಿಟರ್‌ನ್ಸ್‌ ಸಲ್ಲಿಸಲು ಆಧಾರ್‌ ಕಾರ್ಡ್‌ ಸಾಕು.

12:47 pm : 

ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ 1.25 ಲಕ್ಷದವರೆಗೆ ಸಬ್ಸಿಡಿ : ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಶೇ. 5 ರಷ್ಟು ಜಿಎಸ್ ಟಿ ಇಳಿಕೆ

12:44 pm : 

5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ: ವಾರ್ಷಿಕ ಆದಾಯ 400 ಕೋಟಿ ಹೊಂದಿದ ಉದ್ಯಮಕ್ಕೆ ಶೇ. 25 ರಷ್ಟು ತೆರಿಗೆ

12:43 pm : 

ಅಟಲ್‌ ಪೆನ್ಷನ್‌, ನ್ಯಾಷನಲ್‌ ಪೆನ್ಷನ್‌ ಯೋಜನೆ ಪಿಎಫ್ಆರ್‌ಡಿಐ ಜೊತೆ ಜೋಡಿಕೆ. ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಕ್ಕೆ ನೂರು ಲಕ್ಷ ಕೋಟಿ ರೂಪಾಯಿ.

12:42 pm : 

ನೇರ ತೆರಿಗೆ 11 ಲಕ್ಷ ಕೋಟಿಗೆ ಏರಿಕೆ, ನೇರ ತೆರಿಗೆ ಸಂಗ್ರಹದಲ್ಲಿ ಶೇ, 78 ರಷ್ಟು ಏರಿಕೆ. ಜನರ ಮೇಲೆ ತೆರಿಗೆ ಹೊರಿಸಲು ಬಯಸುವುದಿಲ್ಲ- ನಿರ್ಮಲಾ ಸೀತಾರಾಮನ್

12:41 pm : 

1. 2.5, 10, 20 ರೂಪಾಯಿ ನಾಣ್ಯಗಳ ಬಿಡುಗಡೆ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಖಾಸಗಿ ಹೂಡಿಕೆಗೆ ಆಹ್ವಾನ

12:26 pm : 

ಬ್ಯಾಂಕ್‌ಗಳ ಏಕೀಕರಣಕ್ಕೆ ಒತ್ತು. ಬ್ಯಾಂಕ್‌ಗಳ 1 ಲಕ್ಷ ಕೋಟಿ ಅನುತ್ಪಾದಕ ಆಸ್ತಿ ರಿಕವರಿ. ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಗೆ 70 ಸಾವಿರ ಕೋಟಿ ರೂಪಾಯಿ ಮರುಪೂರ್ಣ.

12:22 pm : 

17 ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆಗೆ ಏರಿಸಲು ನಿರ್ಧಾರ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿ ಸ್ಥಾಪನೆ.

12:20 pm : 

ಜನ್‌ಧನ್‌ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂಪಾಯಿ ಓವರ್‌ ಡ್ರಾಫ್ಟ್. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿಯಲ್ಲಿ ಸಾಲ.

12:17 pm : 

ಎನ್ ಆರ್ ಐಗಳಿಗೆ ಆಧಾರ್ ಆಧಾರಿತ ಪಾಸ್ ಪೋರ್ಟ್ ನೀಡಲು ನಿರ್ಧಾರ

12:14 pm : 

ನಾರಿ ಟು ನಾರಾಯಣಿ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು. ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಲಿಂಗ ತಾರತಮ್ಯ ನಿವಾರಣೆಗೆ ಸರ್ಕಾರದಿಂದ ಹೊಸ ಯೋಜನೆ. ಉದ್ಯಮಗಳಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿಸಲು ಕ್ರಮ. ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷದ ವರೆಗೆ ಸಾಲ ಸೌಲಭ್ಯ.

12:11 pm : 

ಕಾಯಕವೇ ಕೈಲಾಸ ಎಂದು ಜಗಜ್ಯೋತಿ ಬಸವೇಶ್ವರರ ವಚನ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್

12:10 pm : 

ಎಲ್ ಇಡಿ ಬಳಕೆ ಉತ್ತೇಜಿಸಲು 60 ಕೋಟಿ ಬಲ್ಬ್ ವಿತರಣೆ, ಎಲ್ ಇಡಿ ಬಳಕೆಯಿಂದ ಪ್ರತಿವರ್ಷ 18 ಸಾವಿರ ಕೋಟಿ ಉಳಿತಾಯ, ಸೋಲಾರ್ ಮೂಲಕ ಎಲ್ ಇಡಿ ಬಳಕೆಗೆ ಉತ್ತೇಜನ,ಉಜಾಲಾ ಮೂಲಕ ಎಲ್ ಇಡಿ ಬಲ್ಬ್ ಬಳಕೆ ಉತ್ತೇಜಿಸಲು ನಿರ್ಧಾರ

12:09 pm : 

60 ವರ್ಷ ಮೇಲ್ಪ ಟ್ಟ ಕಾರ್ಮಿಕರಿಗೆ ತಿಂಗಳಿಗೆ 3 ಸಾವಿರ ರೂ. ಪೆನ್ಷನ್.

12:07 pm : 

ರೋಬೋಟಿಕ್ ತಂತ್ರಜ್ಞಾನ ಉದ್ಯಮಕ್ಕೆ ಆದ್ಯತೆ. ಸ್ಯ್ಟಾಂಡ್ ಅಪ್ ಯೋಜನೆಗಳಲ್ಲಿ 2 ವರ್ಷದಲ್ಲಿ 300 ಉದ್ಯಮ ಸ್ಥಾಪನೆ.

12:06 pm : 

ಸ್ಟ್ಯಾಂಡ್ ಅಪ್ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಣದ ನೆರವು

12:05 pm : 

ನೂತನ 4 ಕಾರ್ಮಿಕ ಕೋರ್ಟ್ ಗಳ ಸ್ಥಾಪನೆಗೆ ನಿರ್ಧಾರ, ಸ್ಟಾರ್ಟ್ ಅಪ್ ಯೋಜನೆಗಳ ಮಾಹಿತಿಗಾಗಿ ನೂತನ ವಾಹಿನಿ,ದೂರದರ್ಶನ ಸಹಭಾಗಿತ್ವದಲ್ಲಿ ನೂತನ ವಾಹಿನಿ ಕಾರ್ಯಾರಂಭ

12:04 pm : 

ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ನಿರ್ಮಾಣ. 10 ಲಕ್ಷ ಯುವಕರಿಗೆ ಕೌಲಶ್ಯ ಅಭಿವೃದ್ಧಿ ತರಬೇತಿ. 3ಡಿ ಪ್ರಿಂಟಿಂಗ್ ಅಧ್ಯಯನಕ್ಕೆ ಯುವಕರಿಗೆ ನೆರವು.

12:02 pm : 

ಸ್ವಚ್ಛ ಭಾರತ್‌ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ. ಗ್ರಾಮೀಣ ಪ್ರದೇಶದಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ.

11:58 am : 

ಭಾರತದ ಮೂರು ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ: ಐಐಟಿ, ಐಐಎಂ. ಐಐಎಸ್ ಸಿ ಸಂಸ್ಥೆಗಳಿಗೆ 400 ಕೋಟಿ ಅನುದಾನ, ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆಗಳನ್ನಾಗಿಸಲು ಅನುದಾನ

11:58 am : 

ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ. ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು. ‘ಗ್ಯಾನ್’ ಯೋಜನೆ ಮೂಲಕ ಐಐಎಂ, ಐಐಟಿ, ಐಐಎಸ್ ಸಿ ಜಂಟಿ ಅಧ್ಯಯನ.

11:57 am : 

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏಕ ರೀತಿಯ ಜೀವನಕ್ಕೆ ಒತ್ತು ನೀಡಲಾಗುವುದು

11:57 am : 

ಸಬ್ ಅರ್ಬನ್ ರೈಲು ಯೋಜನೆಗಳಿಗೆ ಒತ್ತು. ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಾಣ. ಮೆಟ್ರೋ ರೈಲು ಉತ್ತೇಜಿಸಲು ಪಿಪಿಪಿ ಮಾದರಿ ಯೋಜನೆಗೆ ಒತ್ತು.

11:55 am : 

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ 81 ಲಕ್ಷ ಮನೆಗಳ ನಿರ್ಮಾಣ ಯೋಜನೆ. 26 ಲಕ್ಷ ಮನೆಗಳು ಈಗಾಗಲೆ ನಿರ್ಮಾಣವಾಗಿದೆ. 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ. ನೂತನ ತಂತ್ರಜ್ಞಾನದಿಂದ ಆಧುನಿಕ ಮನೆ ನಿರ್ಮಾಣ.

11:52 am : 

ಜಲಶಕ್ತಿ ಸಚಿವಾಲಯ ಸ್ಥಾಪನೆ. ಜಲಸಂವರ್ಧನೆ, ಕುಡಿಯುವ ನೀರು ಯೋಜನೆಗೆ ಮೊದಲ ಆದ್ಯತೆ. ಹರ್ ಘರ್ ಜಲ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ.

11:46 am : 

ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಹೂತ್ತು, ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ

11:45 am : 

ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು

11:43 am : 

ಶೇ .97 ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ಸೌಲಭ್ಯ, ಮುಂದಿನ ಐದು ವರ್ಷದಲ್ಲಿ 25 ಸಾವಿರ ಕಿ . ಮೀ. ರಸ್ತೆ ನಿರ್ಮಾಣ,1.25 ಲಕ್ಷ ಕಿ. ಮೀ. ರಸ್ತೆ ಮೇಲ್ದರ್ಜೆಗೇರಿಸಲು ನಿರ್ಧಾರ

11:41 am : 

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ,ಪಿಎಂಜಿಎಸ್ ವೈ ಯೋಜನೆ ಗ್ರಾಮೀಣ ಜನರಲ್ಲಿ ಬದಲಾವಣೆ ತಂದಿದೆ- ಸೀತಾರಾಮನ್

11:40 am : 

ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ, ಪ್ರತಿ ಮನೆಗೂ ಶೌಚಾಲಯ, ವಿದ್ಯುತ್, ಎಲ್ ಪಿಜಿ ಸೌಕರ್ಯ

11:38 am : 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 24 ಸಾವಿರ ಕೋಟಿ.

11:35 am : 

ಭಾರತದಲ್ಲಿ ಎಫ್‌ಡಿಐ ಹೂಡಿಕೆದಾರರನ್ನು ಆಕರ್ಷಿಸಲು ಕ್ರಮ. ವಿಮೆ ಕ್ಷೇತ್ರದಲ್ಲಿ ಶೇ. 100ರಷ್ಟು ಎಫ್‌ಡಿಐ ಹೂಡಿಕೆಗೆ ಅನುಮತಿ. ಉಳಿತಾಯ ಯೋಜನೆಗಳಿಗೆ ಜನರನ್ನು ಆಕರ್ಷಿಸಲು ಹಲವು ಯೋಜನೆ.

11:35 am : 

ಎಫ್‌ಡಿಐ ಹೂಡಿಕೆಗೆ ಈಗಲೂ ಭಾರತ ಪ್ರಮುಖ ಮಾರುಕಟ್ಟೆ. ಎಫ್‌ಡಿಐ 1.3 ಟ್ರಿಲಿಯನ್ ನಿಂದ 1.5 ಟ್ರಿಲಿಯನ್ ಗೆ ಏರಿಕೆ.

11:33 am : 

ರೈಲು ಮೂಲಸೌಕರ್ಯ ಅಭಿವೃದ್ಧಿಗೆ 50 ಲಕ್ಷ ಕೋಟಿ ಅಗತ್ಯ, ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ

11:28 am : 

ಕಾರ್ಪೋರೇಟ್ ಬಾಂಡ್ ಕುರಿತು ಹೊಸ ನೀತಿ ಜಾರಿಗೆ ನಿರ್ಧಾರ: ಎಫ್ ಟಿಐ ಉತ್ತೇಜಿಸಲು ಕೆವೈಸಿ ನೀತಿಯ ಸರಳೀಕರಣ

11:27 am : 

ಪ್ರಧಾನಮಂತ್ರಿ ‘ಕರ್ಮಯೋಗಿ ಮಾನ್ ಸಮ್ಮಾನ್’ ಯೋಜನೆಗೆ ಚಾಲನೆ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಶನ್.

11:26 am : 

ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಅದಕ್ಕಾಗಿ 350 ಕೋಟಿ ರು. ಎಂಎಸ್ಎಂಇಗಳಿಗೆ ಸಾಲ ನೀಡಿಕೆ.

11:25 am : 

ಹೆಚ್ಚಿನ ಗೃಹ ನಿರ್ಮಾಣಕ್ಕೆ ಆದ್ಯತೆ , ಎಂಎಸ್ ಎಂಇಗಳಿಗೆ 350 ಕೋಟಿ ಸಾಲ ನೀಡಿಕೆ: ಎಂಸ್ ಎಂ ಇಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ

11:22 am : 

‘ಒನ್ ನೇಶನ್ ಒನ್ ಗ್ರಿಡ್’ ಮೂಲಕ ವಿದ್ಯುತ್ ಸೌಕರ್ಯ. ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್ ನಿರ್ಮಾಣಕ್ಕೆ ನಿರ್ಧಾರ.

11:20 am : 

ಜಲಮಾರ್ಗ ಯೋಜನೆಗೆ ಒತ್ತು. ಗಂಗಾನದಿಯಲ್ಲಿ ಒಳನಾಡು ಜಲಸಾರಿಗೆಗೆ ಆಧ್ಯತೆ. ಸರಕು ಸಾಗಣೆಗೆ ಅನುಕೂಲಕಾರಿ ವಾತಾವರಣ ನಿರ್ಮಾಣ.

11:19 am : 

ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ಧನ ಘೋಷಣೆ ,ಮುಂದಿನ 3 ವರ್ಷಕ್ಕೆ 10 ಸಾವಿರ ಕೋಟಿ ಪ್ರೋತ್ಸಾಹ ಧನ,ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ಪ್ರೇಮಿ ವಾಹನ ವ್ಯವಸ್ಥೆ

11:17 am : 

ಸಾಗರ್ ಮಾಲಾ, ಭಾರತ್ ಮಾಲಾ ಮೂಲಕ ಸಾರಿಗೆ ಕ್ಷೇತ್ರಕ್ಕೆ ಕೊಡುಗೆ. ಸಾರಿಗೆ ವೆಚ್ಚವನ್ನು ಕಡಿಮಗೊಳಿಸೋ ಉದ್ದೇಶದಿಂದ ಯೋಜನೆ. ಗ್ರಾಮ ಹಾಗೂ ನಗರಗಳ ಅಂತರ ಕಡಿಮೆಗೊಳಿಸುವ ನಿಟ್ಟಿನಿಂದ ಸಾರಿಗೆ ಕಾಂತ್ರಿ.

11:17 am : 

300 ಕಿ. ಮೀ. ಮೆಟ್ರೋ ಯೋಜನೆಗೆ ಅನುಮೋದನೆ

11:16 am : 

ಮುದ್ರಾ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ – ನಿರ್ಮಲಾ ಸೀತಾರಾಮನ್

11:15 am : 

ಉಡಾನ್ ಯೋಜನೆಯಿಂದ ಜನಸಾಮಾನ್ಯರ ಪಾಲಿಗೆ ಆಶಾಕಿರಣ

11:13 am : 

ಭಾರತದಲ್ಲಿ 3 ಟ್ರಿಲಿಯನ್‌ ಆರ್ಥಿಕತೆ ಇತ್ತು. ಇದೀಗ ಕೆಲ ವರ್ಷಗಳಲ್ಲೇ 5 ಟ್ರಿಲಿಯನ್‌ ಆರ್ಥಿಕತೆ ಯೋಜನೆ ರೂಪಿಸಿದೆ. ನಾವು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಿದ್ದೇವೆ.

11:13 am : 

ಮೂಲಸೌಕರ್ಯ, ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು- ನಿರ್ಮಲಾ ಸೀತಾರಾಮನ್

11:11 am : 

ಬಲಿಷ್ಠ ದೇಶ, ಬಲಿಷ್ಠ ನಾಗರಿಕ ನಮ್ಮ ಗುರಿ- ನಿರ್ಮಲಾ ಸೀತಾರಾಮನ್

11:11 am : 

ಐದು ವರ್ಷದ ಹಿಂದೆ ಜಗತ್ತಿನಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಪ್ರಸ್ತುತ 5ನೇ ಸ್ಥಾನದಲ್ಲಿದೆ.

11:11 am : 

ಸರ್ಕಾರಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತೇವೆ-ನಿರ್ಮಲಾ ಸೀತಾರಾಮನ್

11:10 am : 

ಜನರ ಭಾಗವಹಿಸುವಿಕೆಯೊಂದಿಗೆ ಟೀಂ ಇಂಡಿಯಾ

11:04 am : 

ಪುತ್ರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವುದನ್ನು ವೀಕ್ಷಿಸಲು ಆಗಮಿಸಿದ ಅವರ ಪೋಷಕರಾದ ಸಾವಿತ್ರಿ ಮತ್ತು ನಾರಾಯಣನ್ ಸೀತಾರಾಮನ್

11:02 am : 

ಲೋಕಸಭೆಯಲ್ಲಿ 2019-20ನೇ ಸಾಲಿನ ವಿತ್ತೀಯ ಬಜೆಟ್ ಮಂಡನೆ ಆರಂಭಿಸಿದ ಸಚಿವೆ ನಿರ್ಮಲಾ ಸೀತಾರಾಮನ್

10:53 am : 

ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ ಕೇಂದ್ರ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್

10:49 am : 

ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇದು ಚೊಚ್ಚಲ ಬಜೆಟ್ ಮಂಡನೆ

10:47 am : 

ಇಂದು ಬಜೆಟ್ ಮಂಡನೆ ಹಿನ್ನಲೆಯಲ್ಲಿ ಏರಿಕೆ ಕಂಡ ಸೆನ್ಸೆಕ್ಸ್, 114.67 ಅಂಕಗಳಷ್ಟು ಏರಿಕೆ ಕಂಡುಬಂದು 40 ಸಾವಿರದಲ್ಲಿ ವಹಿವಾಟು ಆರಂಭಿಸಿದ ಮುಂಬೈ ಷೇರುಪೇಟೆ

10:45 am : 

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ

10:45 am : 

ಇದು ಬಜೆಟ್ ಅಲ್ಲ, ಲೆಡ್ಜರ್, ಕೆಂಪು ಬಣ್ಣದ ಬಟ್ಟೆ ಭಾರತೀಯ ಸಂಸ್ಕೃತಿ ಸಂಕೇತ, ಗುಲಾಮಗಿರಿಯಿಂದ ಮುಕ್ತಿ ಸೂಚನೆ

10:41 am : 

ಬಜೆಟ್ ಮಂಡನೆಗೆ ಮುನ್ನ ರಾಷ್ಟ್ರಪತಿಯವರಿಂದ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್

10:41 am : 

ನಾಲ್ಕು ಪಟ್ಟಿಯ ಕೆಂಪು ಬಟ್ಟೆಯಲ್ಲಿ ಸುತ್ತಿದ ಬಜೆಟ್ ಪ್ರತಿ, ಸೂಟ್ ಕೇಸ್ ಗೆ ತಿಲಾಂಜಲಿ

10:40 am : 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆ ಆರಂಭ!

10:40 am : 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಜೆಟ್ ಮಂಡನೆಗೆ ಮುನ್ನ ಸಚಿವ ಸಂಪುಟ ಸಭೆ

10:39 am : 

ಸಂಸತ್ತಿಗೆ ಆಗಮಿಸಿದ ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್

12:03 pm : 

ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ 2019-20 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

No Comments

Leave A Comment