Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಉದ್ಯಾವರದಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ : ಹೆದ್ದಾರಿಯಲ್ಲಿ ಏಕಮುಖ ಸಂಚಾರ

ಉಡುಪಿ: ಇಲ್ಲಿನ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ರ ಬಲಾಯಿಪಾದೆ ಎಂಬಲ್ಲಿ ಬುಧವಾರ ಬೆಳಗಿನ ಜಾವ ಗ್ಯಾಸ್‌ ಟ್ಯಾಂಕರೊಂದು ಪಲ್ಟಿಯಾಗಿದ್ದು, ಆತಂಕಕ್ಕೆ ಕಾರಣವಾಯಿತು.

ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆಯಾಗುತ್ತಿಲ್ಲ ಎನ್ನುವುದು ಖಚಿತವಾಗಿದೆ.

ಮೊದಲಿಗೆ ಹೆದ್ದಾರಿಯಲ್ಲಿ ಸಂಚಾರವನ್ನು ತಡೆಯಲಾಗಿದ್ದು , ಗ್ಯಾಸ್‌ ಲೀಕ್‌ ಆಗುತ್ತಿಲ್ಲ ಎನ್ನುವುದು ಖಚಿತವಾದ ಬಳಿಕ ಇನ್ನೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಅಗ್ನಿ ಶಾಮಕದಳ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಗ್ಯಾಸ್‌ ಟ್ಯಾಂಕರ್‌ ತೆರವುಗೊಳಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಟ್ಯಾಂಕರ್‌ ಮಂಗಳೂರಿನಿಂದ ಕಾರವಾರದತ್ತ ತೆರಳುತ್ತಿತ್ತು. ಉದ್ಯಾವರ ಬಂಕ್‌ನಲ್ಲಿ ಡಿಸೇಲ್‌ ತುಂಬಿಸಿ ಹೋದ ಚಾಲಕ ಎಟಿಎಂ ಕಾರ್ಡ್‌ ಬಿಟ್ಟು ಹೋಗಿದ್ದು, ಸ್ವಲ ದೂರ ಹೋಗಿ ತರಾತುರಿಯಲ್ಲಿ ಟ್ಯಾಂಕರನ್ನು ತಿರುಗಿಸುವ ವೇಳೆ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

No Comments

Leave A Comment