Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಪಂಜಾಬ್‌ ರಸ್ತೆಗಿಳಿಯದ ಸರಕಾರಿ ಬಸ್ಸುಗಳು : ಗುತ್ತಿಗೆ ನೌಕರರ 3 ದಿನಗಳ ಮುಷ್ಕರ

ಚಂಡೀಗಢ : ತಿಂಗಳ ವೇತನವನ್ನು ಏರಿಸಬೇಕು ಮತ್ತು ಉದ್ಯೋಗವನ್ನು ಕ್ರಮಬದ್ಧಗೊಳಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಮುಂದಿಟ್ಟು ರಾಜ್ಯ ಸರಕಾರಿ ಒಡೆತನದ ಪಂಜಾಬ್‌ ರೋಡ್‌ ವೇಸ್‌ ಗುತ್ತಿಗೆ ನೌಕರರು ಇಂದು ಮಂಗಳವಾರದಿಂದ ಮೂರು ದಿನಗಳ ಮುಷ್ಕರವನ್ನು ಆರಂಭಿಸಿದ್ದಾರೆ.

ಪರಿಣಾಮವಾಗಿ ಪಂಜಾಬ್‌ ರಾಜ್ಯಾದ್ಯಂತದ ಸುಮಾರು 1,500ಕ್ಕೂ ಅಧಿಕ ರಾಜ್ಯ ಸಾರಿಗೆ ಬಸ್ಸುಗಳು ಇಂದು ರಸ್ತೆಗೆ ಇಲಿದಿಲ್ಲ. ಹಾಗಾಗಿ ರಾಜ್ಯಾದ್ಯಂತ ಪ್ರಯಾಣಿಕರು ತೀವ್ರವ್ರ ಪರದಾಟಕ್ಕೆ ಗುರಿಯಾಗಿದ್ದಾರೆ. ಅಂತೆಯೇ ಜನಜೀವನ ತೀವ್ರವಾಗಿ ಬಾಧಿತವಾಗಿದೆ.

ಪಂಜಾಬ್‌ ರೊಡ್‌ ವೇಸ್‌ ಪನ್‌ಬಸ್‌ ಗುತ್ತಿಗೆ ನೌಕರರ ಸಂಘಟನೆಯ ಬ್ಯಾನರ್‌ನಡಿ ಮುಷ್ಕರಕ್ಕೆ ಇಳಿದಿರುವವರಲ್ಲಿ ಹೆಚ್ಚಿನವರು ರಾಜ್ಯ ಸಾರಿಗೆ ಬಸ್‌ ಚಾಲಕರು ಮತ್ತು ನಿರ್ವಾಹಕರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ನಾವು ಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದೇವೆ. ನಮ್ಮ ನಿರಂತರ ಬೇಡಿಕೆಯ ಹೊರತಾಗಿಯೂ ನಮ್ಮ ಉದ್ಯೋಗವನ್ನು ಸರಕಾರ ಕ್ರಮ ಬದ್ಧಗೊಳಿಸಿಲ್ಲ ಎಂದು ಲೂಧಿಯಾನದಲ್ಲಿ ಪ್ರತಿಭಟನ ನಿರತರಾಗಿರುವ ಸಂಘಟನೆಯ ಸದಸ್ಯರು ಹೇಳಿದ್ದಾರೆ.

No Comments

Leave A Comment