Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ತೆಲುಗಿನ ಸೂಪರ್ ಹಿಟ್ ಚಿತ್ರ ರಂಗಸ್ಥಳಂ ಕನ್ನಡ ಡಬ್ ಜುಲೈ 12ಕ್ಕೆ ರಿಲೀಸ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು. ಈ ನಡುವೆ ತೆಲುಗು ಹಾಗೂ ತಮಿಳಿನ ಸೂಪರ್ ಹಿಟ್ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿದ್ದು ಇದಕ್ಕೆ ಮತ್ತೊಂದು ಸೇರ್ಪಡೆ ತೆಲುಗಿನ ರಂಗಸ್ಥಳಂ.

ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ರಾಮ್ ಚರಣ್ ಅಭಿನಯದ ರಂಗಸ್ಥಳಂ ಕನ್ನಡದ ಡಬ್ ಚಿತ್ರ ಜುಲೈ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಸಮಂತಾ ಅಕಿನೇನಿ ಅಭಿನಯಿಸಿದ್ದು 2018ರ ಮಾರ್ಚ್ 30ರಂದು ತೆಲುಗಿನಲ್ಲಿ ಬಿಡುಗಡೆಯಾಗಿತ್ತು.

ರಂಗಸ್ಥಳಂ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು ಕನ್ನಡ ನಿರ್ಮಾಪಕ ಜಾಕ್ ಮಂಜು ರಾಜ್ಯಾದ್ಯಂತ ವಿತರಣೆಯ ಹಕ್ಕು ಪಡೆದಿದ್ದಾರೆ. ಇನ್ನು ಜುಲೈ 12ರಂದು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಂಗಸ್ಥಳಂ ಬಿಡುಗಡೆಯಾಗಲಿದೆ.

No Comments

Leave A Comment