Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

ಟಿಆರ್‌ಎಸ್‌ ಕಾರ್ಯಕರ್ತರಿಂದ ಮಹಿಳಾ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ-ಬಡಿಗೆಗಳಿಂದ ದಾಳಿ

ಅಸಿಫಾಬಾದ್‌: ಉದ್ರಿಕ್ತ ಟಿಆರ್‌ ಎಸ್‌ ಕಾರ್ಯಕರ್ತರು ಸರ್ಕಾರದ ಯೋಜನೆ ವಿರೋಧಿಸಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬಂದಿಗಳ ಮೇಲೆ  ದೊಣ್ಣೆಗಳಿಂದ ದಾಳಿ ಮಾಡಿರುವ ಘಟನೆ ಅಸಿಫಾಬಾದ್‌ನ ಸಿರ್‌ಪುರ್‌ ಕಾಜಜ್‌ನಗರ್‌ ಎಂಬಲ್ಲಿ ನಡೆದಿದೆ.

ಯೋಜನೆ ಜಾರಿಯಾಗಿ 20 ಹೆಕ್ಟೇರ್‌ ಜಾಗದಲ್ಲಿ ಗಿಡಗಳನ್ನು ನಡಲು ಆಗಮಿಸಿದ ವೇಳೆ ಸ್ಥಳೀಯ ಟಿಆರ್‌ಎಸ್‌ ಕಾರ್ಯಕರ್ತರು ದೊಣ್ಣೆ ಹಿಡಿದು ದಾಳಿ ನಡೆಸಿದ್ದಾರೆ. ಮಹಿಳಾ ಅರಣ್ಯ ಅಧಿಕಾರಿಯೊಬ್ಬರನ್ನು ದೊಣ್ಣೆಗಳಿಂದ ಮಾರಣಾಂತಿಕವಾಗಿ ಹೊಡೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಉದ್ರಿಕ್ತರು ದೊಣ್ಣೆಗಳನ್ನು ಹಿಡಿದು ಪೊಲೀಸ್‌ ಮತ್ತು ಅರಣ್ಯ ಇಲಾಖೆಯ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿ ಅನಿತಾ ಅವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಶಾಸಕ ಕೊನೆರು ಕೋನಪ್ಪ ಮತ್ತುಸಹೋದರ ಕೃಷ್ಣಾ ಅವರ ಬೆಂಬಲಿಗರು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ಘಟನೆ ಖಂಡಿಸಿದ್ದುಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳಬೇಕು ಎಂದು ಆಗ್ರಹಿಸಿದೆ.

No Comments

Leave A Comment