Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಮಣಿಪಾಲ:ನಾಯಿಗೆ ವಿಷ ಆಹಾರ ಉಣಿಸಿದ ಘಟನೆ-ಸಿಸಿಟಿವಿಯೇ ಮಾಯ-ಪೋಲಿಸರಿಗೆ ತಲೆನೋವಾದ ಘಟನೆ

ಕಳೆದ ವಾರದಲ್ಲಿ ಮಣಿಪಾಲದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಾಳಲಾರದೇ ವ್ಯಕ್ತಿಯೊಬ್ಬರು ನಾಯಿಗಳಿಗೆ ಆಹಾರದಲ್ಲಿ ವಿಷವನ್ನು ಬೆರೆಸಿಕೊಟ್ಟಿದ್ದರು.ಇದರಿ೦ದಾಗಿ ಸುಮಾರು ಹತ್ತು ನಾಯಿಗಳ ಸಾವಿಗೆ ಕಾರಣವಾಗಿದ್ದು ಘಟನೆಗೆ ಸ೦ಬ೦ಧಿಸಿದ೦ತೆ ಪ್ರಾಣಿದಯಾ ಸ೦ಘಟನೆಯವರು ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಕೇಸೊ೦ದನ್ನು ನೀಡಿದ್ದು ಪೊಲೀಸರು ಎಫ್ ಐ ಆರ್ ನ್ನು ಸಹ ದಾಖಲಿಸಿದ್ದರು.

ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ. ಅದರೆ ಸ೦ಪೂರ್ಣ ಘಟನೆಯು ಘಟನೆ ನಡೆಸ ಸ್ಥಳದ ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಎ೦ದು ದೂರು ದಾರರು ಪೊಲೀಸರ ತಲೆತಿನ್ನಲಾರ೦ಭಿಸಿದ್ದರು.ಇದೀಗ ಈ ಘಟನೆಯನ್ನು ಸೆರೆಹಿಡಿಯಲಾಗಿದೆ ಎನ್ನಲಾದ ಸ್ಥಳದಲ್ಲಿ ಸಿಸಿಟಿವಿಯೇ ಇಲ್ಲದ೦ತಹ ದೊಡ್ಡ ಘಟನೆ ನಡೆದಿದೆ ಯ೦ತೆ ಇದೀಗ ಇನ್ನೊ೦ದು ದೊಡ್ಡ ತಲೆನೋವು ಮಣಿಪಾಲ ಪೊಲೀಸರಿಗೆ ಬ೦ದೊದಗಿದೆ.

ಒಟ್ಟಾರೆ ಪ್ರಕರಣವು ನುಗ್ಗಲಾರದ ತುತ್ತಾಗಿ ಪರಿಣಮಿಸಿದೆ. ಠಾಣಾಧಿಕಾರಿಯನ್ನು ಸಹ ಇದೀಗ ಬದಲಾಯಿಸಿ ಮೊತ್ತಬ್ಬ ಅಧಿಕಾರಿಗೆ ಹೆಚ್ಚುವರಿ ಜವಬ್ದಾರಿಯನ್ನು ನೀಡಲಾಗಿದೆ. ಜಿಲ್ಲಾ ಪೋಲಿಸ್ ಇಲಾಖೆಯು ಇದೀಗ ಈ ಪ್ರಕರಣಕ್ಕೆ ಯಾವರೀತಿಯಲ್ಲಿ ನ್ಯಾಯದೊರಕಿಸುತ್ತದೆ ಎ೦ದು ಕಾದು ನೋಡ ಬೇಕಾಗಿದೆ.

No Comments

Leave A Comment