Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ‘ದಂಗಲ್ ‘ಖ್ಯಾತಿಯ ಜೈರಾ ವಾಸಿಮ್

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, “ದಂಗಲ್” ಖ್ಯಾತಿಯ ಜೈರಾ ವಾಸಿಮ್ ಬಾಲಿವುಡ್ ಹಾಗೂ ಚಿತ್ರಜಗತ್ತಿನಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ತನ್ನ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಯಾಗಿದ್ದು ಕೆಲಸದಲ್ಲಿ ಣಾನು ಖುಷಿಯಾಗಿಲ್ಲ ಎಂದಿರುವ ಜೈರಾ ಈ ಕಾರಣಕ್ಕೆ ತಾನು ನಟನಾ ಕ್ಷೇತ್ರದೊಡನೆ ಸಂಬಂಧ ಕಡಿದುಕೊಂಡಿರುವುದಾಗಿ ಹೇಳಿದ್ದಾರೆ.

ನಟಿ ಈ ಬಗೆಗೆ ತನ್ನ ಫೇಸ್‌ಬುಕ್ ಪುಟದಲ್ಲಿ ವಿವರವಾದ ಪೋಸ್ಟ್‌ ಬರೆದುಕೊಂಡಿದ್ದು ಅದನ್ನು ತಮ್ಮೆಲ್ಲಾ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕಾಶ್ಮೀರಿ ಮೂಲದ ದಂಗಲ್ ಖ್ಯಾತಿಯ ತಾರೆ “ನಾನು ಇಲ್ಲಿಗೆ ಹೊಂದಿಕೊಳ್ಳಬಹುದಾದರೂ  ನಾನು ಇಲ್ಲಿಗೆ ಸೇರಿದವನಲ್ಲ” ಎಂದು ಅರಿತುಕೊಂಡೆ ಎಂದು ಹೇಳಿದ್ದಾರೆ.”ಐದು ವರ್ಷಗಳ ಹಿಂದೆ ನಾನು ನನ್ನ ಜೀವನವನ್ನು ಶಾಶ್ವತವಾಗಿ ಬದಲಿಸುವ ನಿರ್ಧಾರವನ್ನು ತೆಗೆದುಕೊಂಡೆ. ನಾನು ಬಾಲಿವುಡ್‌ನಲ್ಲಿ ಹೆಜ್ಜೆ ಇಡುತ್ತಿದ್ದಂತೆ , ಅದು ನನಗೆ ಭಾರಿ ಜನಪ್ರಿಯತೆಯ ನ್ನೇ ತಂದುಕೊಟ್ಟಿತು. . ನಾನು ಸಾರ್ವಜನಿಕ ಗಮನ ಸೆಳೆಯುವ ವ್ಯಕ್ತಿಯಾಗಿ ಬದಲಾದೆ.ನನ್ನ ಯಶಸ್ಸನ್ನು  ಯುವಕರಿಗೆ ಆದರ್ಶಪ್ರಾಯ ಎಂದೆಲ್ಲಾ ಬಿಂಬಿಸಲಾಗಿತ್ತು. ಆದಾಗ್ಯೂ, ಅದು ಎಂದಿಗೂ ನಾನು ಮಾಡಲು ಅಥವಾ ಆಗಲು ಹೊರಟದ್ದಲ್ಲ. ಅದರಲ್ಲೂ ವಿಶೇಷವಾಗಿ ನನ್ನ ಯಶಸ್ಸು ಮತ್ತು ವೈಫಲ್ಯದ ವಿಚಾರಗಳಿಗೆ ಸಂಬಂಧಿಸಿದಂತೆ, ನಾನು ಅದನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ” ಎಂದು ವಾಸಿಮ್ ಸುದೀರ್ಘ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

18ರ ಹರೆಯದ ನಟಿ ವೃತ್ತಿಯಲ್ಲಿ ಐದು ವರ್ಷಗಳನ್ನು ಪೂರೈಸುತ್ತಿದ್ದಂತೆ, “ಈ ಕ್ಷೇತ್ರ ಹಾಗೂ ಯಶಸ್ಸಿನಿಂದ ನಾನು ನಿಜವಾಗಿಯೂ ಸಂತೋಷವಾಗಿಲ್ಲ ಎಂದು ಒಪ್ಪಿಕೊಳ್ಳಲು ಬಯಸುತ್ತೇನೆ” ಎನ್ನುತ್ತಾರೆ.ಅಲ್ಲದೆ ಈ ಕೆಲಸದ ಬಗೆಗೆ ನನಗೆ ಸಂತಸವಿಲ್ಲ ಎಂದೂ ಸ್ಪಷ್ತಪಡಿಸಿದ್ದಾರೆ.

No Comments

Leave A Comment