Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಹುಷಾರ್! ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ

ಬೆಂಗಳೂರು: ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷತೆ ನಿಯಮ ಉಲ್ಲಂಘಿಸಿದವರಿಗೆ ದಂಡದ ಮೊತ್ತವನ್ನು ರಾಜ್ಯ ಸರ್ಕಾರ ಸುಮಾರು 11 ವರ್ಷಗಳ ನಂತರ ದುಪ್ಪಟ್ಟು ಏರಿಕೆ ಮಾಡಿದೆ.

2007ರಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಪರಿಷ್ಕರಿಸಿ ದಂಡದ ಮೊತ್ತವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಜಾರಿಗೆ ಬರಲಿದೆ.

 

 

ರಾಜ್ಯ ಸರ್ಕಾರದ ಪರಿಷ್ಕೃತ ಆದೇಶದ ಪ್ರಕಾರ, ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನ ನಿಲ್ಲಿಸಿದರೆ ಸಾವಿರ ರೂಪಾಯಿಯಾಗಿರುತ್ತದೆ.

ಅತಿ ವೇಗವಾಗಿ ವಾಹನ ಚಾಲನೆ ಮಾಡಿದರೆ 500 ರೂಪಾಯಿ, ಚಾಲನೆ ಸಮಯದಲ್ಲಿ ಮೊಬೈಲ್ ಬಳಸಿದರೆ, ಅಜಾಗರೂಕತೆ ಚಾಲನೆಗೆ ಮೊದಲ ಸಲ ಸಾವಿರ ರೂಪಾಯಿ, ನಂತರ ತಪ್ಪಿಗೆ 2 ಸಾವಿರ ರೂಪಾಯಿ, ವಿಮೆ ಇಲ್ಲದ ವಾಹನ ಚಲಾಯಿಸಿದರೆ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ನೋಂದಣಿಯಾಗದ ಬೈಕ್ ಚಲಾಯಿಸಿದರೆ ಮೊದಲ ತಪ್ಪಿಗೆ 5 ಸಾವಿರ ರೂಪಾಯಿ, ನಂತರ ತಪ್ಪಿಗೆ 10 ಸಾವಿರ, ಫಿಟ್ ನೆಸ್ ಪ್ರಮಾಣ ಪತ್ರ ಇಲ್ಲದ ಸಾರ್ವಜನಿಕ ವಾಹನಗಳಿಗೆ ಮೊದಲ ಬಾರಿಗೆ 2 ಸಾವಿರ ರೂಪಾಯಿ, ನಂತರ 5 ಸಾವಿರ ದಂಡ ವಿಧಿಸಲು ಆದೇಶಿಸಲಾಗಿದೆ.

No Comments

Leave A Comment