Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಉಡುಪಿ: ಬೈಕ್‌ ಸವಾರರಿಂದ ಮಹಿಳೆಯ ಸರ ಲಪಟಾವಣೆ

ಉಡುಪಿ: ಬೈಕ್‌ನಲ್ಲಿ ಬಂದು ಮಹಿಳೆಯ ಸರ ಎಗರಿಸಿ ಪರಾರಿಯಾದ ಘಟನೆ ಜೂ.25ರಂದು ನಗರದ ಆದರ್ಶ ಆಸ್ಪತ್ರೆ ಬಳಿ ಸಂಭವಿಸಿದೆ.

ವಿದ್ಯಾ ನಾಯ್ಕ ಮತ್ತು ಹೇಮಾ ಅವರು ರಾತ್ರಿ 10.30ಕ್ಕೆ ವೈದ್ಯರ ಭೇಟಿಗಾಗಿ ಬಂದು ತಮ್ಮ ವಾಹನವನ್ನು ಆದರ್ಶ ಆಸ್ಪತ್ರೆ ಎದುರಿನ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿ ಆಸ್ಪತ್ರೆ ಗೇಟಿನ ಮುಂಭಾಗದಲ್ಲಿ ರಸ್ತೆ ದಾಟುವ ಸಮಯದಲ್ಲಿ ಹಿಂಭಾಗದಿಂದ ಬಂದ ಬೈಕ್‌ ಇವರನ್ನು ದಾಟಿ ಮುಂದೆ ಹೋಗಿ ಮತ್ತೆ ವಾಪಸು ಬಂತು.

ಅದರಲ್ಲಿ ಇದ್ದ ಇಬ್ಬರು ಅಪರಿಚಿತರು ವಿದ್ಯಾ ನಾಯ್ಕ ಅವರ ಕುತ್ತಿಗೆಯಲ್ಲಿದ್ದ ಅಂದಾಜು 19,000 ರೂ. ಮೌಲ್ಯದ ಚಿನ್ನದ ಸರ ಎಳೆದು ಪರಾರಿಯಾದರು ಎಂದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment