Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಮನೆ ಕುಸಿದು 6 ಜನರ ಸಾವು:24 ಲಕ್ಷ ರೂ. ಪರಿಹಾರ ನೀಡಿದ ಸಿಎಂ

ಬೀದರ್‌: ಬಸವ ಕಲ್ಯಾಣದ ಛಿಲ್ಲಾ ಗಲ್ಲಿಯಲ್ಲಿ ಮನೆ ಕುಸಿತದಿಂದಾಗಿ ಸಾವನ್ನಪ್ಪಿದ ಒಂದೇ ಕುಟುಂಬದ ಆರು ಜನರಕುಟುಂಬಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು 24 ಲಕ್ಷ ರೂಪಾಯಿ ಪರಿಹಾರಧನದ ಚೆಕ್‌ ವಿತರಿಸಿದರು.

ಬಸವಕಲ್ಯಾಣಕ್ಕೆ ಭೇಟಿ ನೀಡಿದ ಸಿಎಂ ಮನೆ ಕುಸಿತದಿಂದ ಮೃತಪಟ್ಟಿರುವ ಕುಟುಂಬದ ಮುಖ್ಯಸ್ಥರಾದ ಇಸೂಫ್ ಬಕರೆವಾಲೆ ಅವರಿಗೆ 24ಲಕ್ಷ ರೂ.ಗಳ ಚೆಕ್ಕುಗಳನ್ನು ವಿತರಿಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಚಿವರುಗಳಾದ ಬಂಡೆಪ್ಪ ಕಾಶಂಪುರ, ರಹೀಂ ಖಾನ್, ಈಶ್ವರ್ ಖಂಡ್ರೆ, ರಾಜಶೇಖರ್ ಪಾಟೀಲ್, ಶಾಸಕರುಗಳಾದ ಬಿ. ನಾರಾಯಣ್, ವಿಜಯಸಿಂಗ್ ಇದ್ದರು.

ಮಂಗಳವಾರ ರಾತ್ರಿ ನಡೆದ ಭೀಕರ ದುರಂತದಲ್ಲಿ ನದೀಮ್‌ಶೇಖ್‌ (45), ಫರೀದಾ ಬೇಗಂ (34) ಹಾಗೂ ಮಕ್ಕಳಾದ ಆಯುಷಾ ಬಾನು(15), ಮೆಹತಾಬೀ(4), ಫೈಜಾನಾಲಿ (6), ಫರನಾಅಲಿ (4) ಮೃತಪಟ್ಟಿದ್ದರು.

No Comments

Leave A Comment