Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಮಂಗಳೂರು: ಎರಡು ಪ್ರಸಿದ್ದ ಚಿನ್ನಾಭರಣ ಮಳಿಗೆಗಳ ಮೇಲೆ ಐಟಿ ದಾಳಿ, ದಾಖಲೆ ಪರಿಶೀಲನೆ

ಮಂಗಳೂರು: ಮಂಗಳೂರಲ್ಲಿ ಎರಡು ಜನಪ್ರಿಯ ಜ್ಯುವೆಲ್ಲರಿ ಮಳಿಗೆಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಕಂಕನಾಡಿ ಬಳಿ ಇರುವ ಸುಲ್ತಾನ್ ಗೋಲ್ಡ್ ಹಾಗೂ ಸಿಟಿ ಗೋಲ್ಡ್ ಜ್ಯುವೆಲ್ಲರಿ ಮಳಿಗೆಗಳ ಮೇಲೆ ನಿನ್ನೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಇಂದು ಕೂಡಾ ಕಡತಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 

 

ಸುಲ್ತಾನ್ ಗೋಲ್ಡ್ ಶಾಖೆಯೂ ರಾಜ್ಯದ ನಾಲ್ಕು ಕಡೆಗಳಲ್ಲಿದ್ದು, ಮಂಗಳೂರು, ಉಡುಪಿ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ ಶಾಖೆಯ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಕೇರಳದ ಉದ್ಯಮಿ ರವೂಫ್ ಸುಲ್ತಾನ್ ಎಂಬುವವರು ಇದರ ಮಾಲೀಕರಾಗಿದ್ದಾರೆ.

ಇನ್ನು ಗ್ರಾಹಕರಿಗೆ ಐಟಿ ದಾಳಿ ಮಾಹಿತಿ ಇಲ್ಲದ ಕಾರಣ ಎಂದಿನಂತೆ ಚಿನ್ನ ಖರೀದಿಸಲು ಅಂಗಡಿಗೆ ಬರುತ್ತಿದ್ದು ಅಂಗಡಿ ಮುಂದಿದ್ದ ಕಾವಲುಗಾರರು ಎರಡು ದಿನ ಬಿಟ್ಟು ಬನ್ನಿರೆಂದು ಹೇಳುತ್ತಿದ್ದದ್ದು ಕಂಡು ಬಂದಿದೆ.

No Comments

Leave A Comment