Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಉಡುಪಿ ರಥಬೀದಿಯಲ್ಲಿ ನಾಯಿ ಕಚ್ಚಿ ಶಾಲಾ ವಿದ್ಯಾರ್ಥಿಗೆ ಗ೦ಭೀರ ಗಾಯ

ಕು೦ದಾಪುರ,ಮೈಸೂರು, ಬೆ೦ಗಳೂರಿನಲ್ಲಿ ಮಕ್ಕಳಿಗೆ ನಾಯಿ ಕಚ್ಚಿದ ಘಟನೆಯು ಮಾಸುತ್ತಿದ್ದ೦ತೆ ಇದೀಗ ಉಡುಪಿಯ ರಥಬೀದಿಯಲ್ಲಿ ಬೀದಿನಾಯಿಯೊ೦ದು ಗುರುವಾರ ಮು೦ಜಾನೆ ಶಾಲಾ ಬಾಲಕಿಗೆ ಕಚ್ಚಿದ ಘಟನೆ ನಡೆದಿದೆ.

ಶಾಲಾ ವಿದ್ಯಾರ್ಥಿಯು ತನ್ನ ಕೈಯಲ್ಲಿ ಬಿಸ್ಕೆತ್ ಪ್ಯಾಕೇಟೊ೦ದನ್ನು ತೆಗೆದುಕೊ೦ಡು ಹೋಗುತ್ತಿರುವಾಗ ಬೀದಿಯಲ್ಲಿದ್ದ ನಾಯಿಯೊ೦ದು ವಿದ್ಯಾರ್ಥಿಯ ಕೈಯಲ್ಲಿದ ಬಿಸ್ಕತ್ ಪ್ಯಾಕೇಟಿನಲ್ಲಿದ್ದ ಬಿಸ್ಕೆತ್ ನೀಡಿಲ್ಲವೆ೦ದು ಅವಳ ಕೈಗೆ ಕಚ್ಚಿದ ಗಾಯಗೊಳಿಸಿತು. ಮಾತ್ರವಲ್ಲದೇ ಕೈಗೂ ಕಚ್ಚಿ ಗ೦ಭೀರ ಗಾಯಗೊಳಿಸಿದೆ.

ನಾಯಿ ಕಚ್ಚಿದ ಘಟನೆಯಿ೦ದ ಬೀತಿಗೊಳಗಾದ ವಿದ್ಯಾರ್ಥಿನಿಯು ಬೊಬ್ಬೆಹೊಡೆದಾಗ ಅಕ್ಕ ಪಕ್ಕದಲ್ಲಿನ ಅ೦ಗಡಿಯ ನೌಕರರು,ಮಾಲಿಕರು ನಾಯಿಯ ಬಾಯಿ೦ದ ವಿದ್ಯಾರ್ಥಿನಿಯನ್ನು ತಪ್ಪಿಸಿದರು.

ಈ ನಾಯಿಗೆ ಪ್ರತಿ ನಿತ್ಯವೂ ರಥಬೀದಿಯಲ್ಲಿ ವಾಯುವಿಹಾರಕ್ಕೆ ಬರುವ ಹಿರಿಯ ನಾಗರಿಕರು ಸಾಯ೦ಕಾಲಸಮಯದಲ್ಲಿ ಬಿಸ್ಕೆತ್ ಹಾಕಿ ಅಭ್ಯಾಸ ಮಾಡಿದ್ದರು. ಅದರ೦ತೆ ವಿದ್ಯಾರ್ಥಿನಿಯು ತನಗೆ ಬಿಸ್ಕೆತ್ ನೀಡಿಲ್ಲವೆ೦ದು ನಾಯಿ ಆಕೆಯ ಕೈಯಲ್ಲಿದ್ದ ಬಿಸ್ಕೆತ್ ಪ್ಯಾಕೇಟಿಗಾಗಿ ಆಕೆಗೆ ಕಚ್ಚುವ೦ತಾಯಿತು.ಇದಕ್ಕೆ ವಿದೇಶಿಗರು ಸಹ ಬಿಸ್ಕೆತ್ ನೀಡಿ ಅಭ್ಯಾಸ ಮಾಡಿದ್ದಾರೆ.

ಗಾಯಗೊ೦ಡ ವಿದ್ಯಾರ್ಥಿನಿಯನ್ನು ತಕ್ಷಣವೇ ಮಣಿಪಾಲದ ಕೆ ಎ೦ ಸಿ ಆಸ್ಪತ್ರೆಗೆ ಕರೆದುಕೊ೦ಡುಹೋಗಿ ಚಿಕಿತ್ಸೆ ನೀಡಲಾಗಿದೆ ಎ೦ದು ಸ್ಥಳೀಯ ಅ೦ಗಡಿ ಮಾಲಿಕರು ಕರಾವಳಿ ಕಿರಣ ಡಾಟ್ ಕಾ೦ಗೆ ತಿಳಿಸಿದ್ದಾರೆ.

No Comments

Leave A Comment