Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

ಗುಂಡಿನ ಮಳೆಗೆರೆದು ಕಾಂಗ್ರೆಸ್‌ ವಕ್ತಾರನ ಬರ್ಬರ ಹತ್ಯೆ

ಫ‌ರಿದಾಬಾದ್‌ : ಹರಿಯಾಣಾದ ಕಾಂಗ್ರೆಸ್‌ ವಕ್ತಾರರಾಗಿದ್ದ ವಿಕಾಸ್‌ ಚೌಧರಿ ಅವರನ್ನು ಗುರುವಾರ ಬೆಳಗ್ಗೆ ದುಷ್ಕರ್ಮಿಗಳ ಗುಂಪು ಭೀಕರ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ.

ಜಿಮ್‌ಗೆ ಆಗಮಿಸಿದ್ದ ಚೌಧರಿ ಅವರು ಕಾರಿನಿಂದ ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. 8 ರಿಂದ 10 ಗುಂಡುಗಳನ್ನು ಚೌಧರಿ ಅವರನ್ನು ಗುರಿಯಾಗಿರಿಸಿಕೊಂಡು ಹಾರಿಸಲಾಗಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಯಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸರ ತಂಡಗಳನ್ನು ತನಿಖೆಗಾಗಿ ರಚಿಸಲಾಗಿದೆ.

ಹರಿಯಾಣದಲ್ಲಿ ಜಂಗಲ್‌ ರಾಜ್‌
ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಹರಿಯಾಣ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ತನ್ವಾರಿ, ಇಲ್ಲಿ ಜಂಗಲ್‌ ರಾಜ್‌ ಇದೆ. ನಿನ್ನೆಯೂ ಲೈಂಗಿಕ ದೌರ್ಜನ್ಯ ವಿರೋಧಿಸಿದ್ದಕ್ಕೆ ಮಹಿಳೆಯೊಬ್ಬಳನ್ನು ಇರಿಯಲಾಗಿತ್ತು. ಹತ್ಯೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

No Comments

Leave A Comment