Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

44 ಸಿನಿಮಾಗಳ ನಿರ್ದೇಶಕಿ, ಹಿರಿಯ ನಟಿ ವಿಜಯಾ ನಿರ್ಮಲಾ ವಿಧಿವಶ

ಹೈದರಾಬಾದ್: ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ(75ವರ್ಷ) ಗುರುವಾರ ಹೈದರಾಬಾದ್ ನಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಜಯಾ ನಿರ್ಮಲಾ ಅವರು ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ವಿಜಯಾ ನಟಿಯಾಗಿ, ನಿರ್ಮಾಪಕಿಯಾಗಿ ಹಾಗೂ ನಿರ್ದೇಶಕಿಯಾಗಿ ತೆಲುಗು ಸಿನಿಮಾ ರಂಗದಲ್ಲಿ ಹೆಸರು ಗಳಿಸಿದ್ದರು.

ಸುಮಾರು 44 ತೆಲುಗು ಸಿನಿಮಾಗಳನ್ನು ವಿಜಯಾ ಅವರು ನಿರ್ದೇಶಿಸಿದ್ದಾರೆ. ತೆಲುಗು ಸಿನಿಮಾರಂಗಕ್ಕೆ ಸಲ್ಲಿಸಿದ ಸೇವೆಗಾಗಿ ವಿಜಯಾ ನಿರ್ಮಲಾ ರಘುಪತಿ ವೆಂಕಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

No Comments

Leave A Comment