Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಕಾಶ್ಮೀರ: ಉಗ್ರದಾಳಿಯಲ್ಲಿ ಹುತಾತ್ಮರಾದ ಪೋಲೀಸ್ ಅಧಿಕಾರಿ ಮನೆಗೆ ಅಮಿತ್ ಶಾ ಭೇಟಿ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಂತ್‌ನಾಗ್ ಎಸ್‌ಎಚ್‌ಒ ಹುತಾತ್ಮ ಅರ್ಷದ್ ಖಾನ್ ಅವರ ಮನೆಗೆ ಭೇಟಿ ನೀಡಿದ್ದಾರೆ.

ಜೂನ್ 12 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಅರ್ಷದ್ ಖಾನ್ ಪ್ರಾಣ ಕಳೆದುಕೊಂಡಿದ್ದರು.

 

 

ಅಮಿತ್ ಶಾ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಎರಡು ದಿನಗಳ ಕಾಲದ ಅಧಿಕೃತ ಭೇಟಿಗಾಗಿ ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ.

ಅರ್ಷದ್ ಖಾನ್ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಶಾ ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ.ನಿಮ್ಮ ಕುಟುಂಬದೊಡನೆ ನಾನಿದ್ದೇನೆ ಎಂದು ಭರವಸೆ ಇತ್ತಿದ್ದಾರೆ.

ಬುಧವಾರ ಅವರು ಅಮರನಾಥ ಯಾತ್ರೆಯ ಭದ್ರತಾ ವ್ಯವಸ್ಥೆಗಳ ಪರಿಶೀಲನಾ ಸಭೆಯನ್ನು ನಡೆಸಿದರು ಮತ್ತು ಹಿಂಸಾಚಾರ ರಹಿತ ಯಾತ್ರೆಯನ್ನು ಖಾತ್ರಿಪಡಿಸಲು ಎಲ್ಲಾ  ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಭದ್ರತಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು.

No Comments

Leave A Comment