Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ನೀವು ಸೋತರೆ, ಭಾರತವೇ ಸೋಲು ಕಂಡಂತೆ ಅಂತ ಭಾವಿಸಿದ್ರಾ: “ಕೈ”ಗೆ ಮೋದಿ!

ನವದೆಹಲಿ:ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜನ ನೀಡಿದ ಬಹುಮತದ ತೀರ್ಪನ್ನು ಹಾಗೂ ಇವಿಎಂಗಳನ್ನು ಪ್ರಶ್ನಿಸಿದ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ಲೋಕಸಭೆಯಲ್ಲಿ ನಡೆಯಿತು.

ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಸದನದಲ್ಲಿ ಸಲ್ಲಿಸಲಾದ ವಂದನಾರ್ಪಣೆ ಭಾಷಣದ ಮೇಲೆ ಮಾತನಾಡುತ್ತ, ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿ ಪರಾಜಯಗೊಂಡಿರುವುದನ್ನು ಕಾಂಗ್ರೆಸ್ ಒಪ್ಪಿಕೊಳ್ಳುವಲ್ಲಿ ವಿಫಲವಾಗಿದೆ ಎಂದರು.

“ಕೆಲವು ಜನರು ಹೇಳುತ್ತಾರೆ, ನೀವು(ಬಿಜೆಪಿ) ಚುನಾವಣೆಯಲ್ಲಿ ಗೆದ್ದಿದ್ದೀರಿ. ಆದರೆ ದೇಶದ ಜನರಿಗೆ ಮತ್ತು ಪ್ರಜಾಪ್ರಭುತ್ವಕ್ಕಾದ ನಷ್ಟ ಎಂದು ಹೇಳಿದರು! ಇದು ದೇಶದ ಜನರು ನೀಡಿದ ಬಹುಮತದ ತೀರ್ಪನ್ನು ಅಗೌರವಿಸಿದಂತೆ ಎಂದು ಮೋದಿ ತಿರುಗೇಟು ನೀಡಿದರು.

 

ದೇಶಕ್ಕೆ ಯಾವಾಗ ನಷ್ಟವಾಗುತ್ತದೆ..ಹೀಗಾಗಿ ನಾನು ನಿಮಗೆ ಕೇಳುತ್ತೇನೆ. ವಯನಾಡ್ ಅನ್ನು ಕಳೆದುಕೊಂಡರೆ ಹಿಂದೂಸ್ತಾನಕ್ಕೆ ನಷ್ಟವಾಗುತ್ತದೆಯೇ? ರಾಯ್ ಬರೇಲಿ, ಬೆಹ್ರಾಮ್ ಪುರ್, ತಿರುವನಂತಪುರಂ ಅನ್ನು ಕಳೆದುಕೊಂಡರೆ ಹಿಂದೂಸ್ತಾನಕ್ಕೆ ನಷ್ಟಗಾಗುತ್ತದೆಯೇ? ಅಮೇಠಿಯಿಂದ ಹಿಂದೂಸ್ತಾನಕ್ಕೆ ಏನಾದರು ನಷ್ಟವಾಗುತ್ತದೆಯೇ? ಇದು ಯಾವ ಸೀಮೆಯ ವಾದ. ಒಂದು ವೇಳೆ ಕಾಂಗ್ರೆಸ್ ಗೆ ನಷ್ಟವಾದರೆ ಅದು ದೇಶಕ್ಕಾಗುವ ನಷ್ಟ ಎಂದು ಮೋದಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ನನ್ನ ಮಿತ್ರರು ಹೇಗೆ ಆಲೋಚಿಸುತ್ತಿದೆ ಎಂದರೆ ಒಂದು ವೇಳೆ ಕಾಂಗ್ರೆಸ್ ಗೆಲುವು ಸಾಧಿಸದಿದ್ದರೆ, ಭಾರತ ಪರಾಜಯಗೊಂಡಂತೆಯೇ? ಭಾರತ ಮತ್ತು ಕಾಂಗ್ರೆಸ್ ಪಕ್ಷ ಒಂದೇ ಎಂದು ಭಾವಿಸಿದ್ದೀರಾ? ಇಲ್ಲ..ನೀವು (ಕಾಂಗ್ರೆಸ್) ನಮ್ಮ ಚುನಾವಣಾ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸುವುದನ್ನು ಮುಖ್ಯ ಎಂದರು.

No Comments

Leave A Comment