Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ತಂದೆಯ ಸಾವಿನ ನೋವು ನುಂಗಿ ಆಟ: ದೇಶಾಭಿಮಾನಿ ಹಾಕಿ ಆಟಗಾರ್ತಿಗೆ ಮೆಚ್ಚುಗೆಯ ಮಹಾಪೂರ

ಭಾರತ ಮಹಿಳೆಯರ ಹಾಕಿ ತಂಡ ಇದೇ ಸೋಮವಾರ ಎಫ್‍ಐಎಚ್ ಸೀರಿಸ್ ಫೈನಲ್ ಗೆದ್ದು ಒಲಂಪಿಕ್ ಗೆ ಅರ್ಹತೆ ಪಡೆಯುವ ತನ್ನ ಕನಸಿಗೆ ನೀರೆರೆದಿದೆ. ಇತ್ತ ಅದೇ ತಂಡದ ಆಟಗಾರ್ತಿಯೊಬ್ಬರು ತಮ್ಮ ತಂದೆ ಸಾವಿನ ನಡುವೆಯೇ ದೇಶಕ್ಕಾಗಿ ಆಟವಾಡಿ ಕ್ರೀಡಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ ಲಾಲ್ರೆಮ್ಸಿಯಾಮಿ ತನ್ನ ತಂದೆ ಸಾವನ್ನಪ್ಪಿದ್ದನ್ನೂ ಲೆಕ್ಕಿಸದೆ ದೇಶದ ಗೆಲುವಿಗಾಗಿ ಆಟವಾಡಿ ಗಮನ ಸೆಳೆದಿದ್ದಾರೆ.

ಹಾಕಿ ಸ್ಟ್ರೈಕರ್ ಲಾಲ್ರೆಮ್ಸಿಯಾಮಿ ಪಂದ್ಯ ಮುಕ್ತಾಯವಾದ ನಂತರ ಮಂಗಳವಾರ ತನ್ನ ಊರಿಗೆ ಆಗಮಿಸ್ದ್ದಾರೆ. ಆದರೆ ಅಷ್ಟರಲ್ಲೇ ಆಕೆಯ ತಂದೆ ಇಹಲೋಕದ ಯಾತ್ರೆ ಮುಗಿಸಿದ್ದರು. ತಂದೆ ನಿಧನದ ಬಳಿಕ ಬಂದ ಲಾಲ್ರೆಮ್ಸಿಯಾಮಿಯನ್ನು ಕಂಡ ಅವರ ಕುಟುಂಬ ಕಣ್ಣೀರು ಹಾಕಿದೆ.

No Comments

Leave A Comment