Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಜುಲೈ2ರಿಂದ 7ರವರೆಗೆ ಉಡುಪಿಯಲ್ಲಿ ಅಖಿಲ ಭಾರತ ಸಬ್ ಜ್ಯೂನಿಯರ್ ರ್ಯಾಂಕಿಂಗ್ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ

ಉಡುಪಿ:ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪಂದ್ಯಾಟಗಳನ್ನು ಆಯೋಜಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಈಗಾಗಲೇ ಮಾಡಿರುತ್ತದೆ. ಅಲ್ಲದೇ ಉಡುಪಿ ಜಿಲ್ಲೆಯ ಸುಮಾರು 60 ಮಕ್ಕಳಿಗೆ ಪ್ರತೀ ದಿನ ತರಬೇತಿ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‍ನ ನೆರವು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದೆ. ಇದರ ಪರಿಣಾಮವಾಗಿ ಉಡುಪಿ ಜಿಲ್ಲೆಯ ಹಲವು ಬ್ಯಾಡ್ಮಿಂಟನ್ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆಯುವಲ್ಲಿ ಸಫಲರಾಗಿದ್ದಾರೆ.

ಈವರೆಗೆ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಮತ್ತು ರಾಷ್ಟ್ರಮಟ್ಟದ ರ್ಯಾಂಕಿಂಗ್ ಪಂದ್ಯಾಟ, ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಫ್ ಹಾಗೂ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಫ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ಸಂಘಟಿಸಿದೆ. ಅಖಿಲ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು ನಮ್ಮ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‍ನ ಸಾಧನೆಯನ್ನು ಗುರುತಿಸಿ ಈ ಬಾರಿ ಕಿರಿಯ ಬಾಲಕರ ಹಾಗೂ ಕಿರಿಯ ಬಾಲಕಿಯರ 13ವರ್ಷ ವಯೋಮಿತಿಯೊಳಗಿನ ಅಖಿಲ ಭಾರತ ಸಬ್ ಜ್ಯೂನಿಯರ್ ರ್ಯಾಂಕಿಂಗ್ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ನಮ್ಮ ಅಸೋಸಿಯೇಷನ್‍ಗೆ ನೀಡಿರುತ್ತಾರೆ.

ಜುಲೈ 02-07-2019 ರಿಂದ 07-07-2019 ರಂದು ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ಹಾಗೂ ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ದೇಶವನ್ನು ಪ್ರತಿನಿಧಿಸುವ ಆಟಗಾರಲ್ಲದೆ ದೇಶದ ಎಲ್ಲಾ ರಾಜ್ಯದ ಅಗ್ರ ಶ್ರೇಯಂಕಿತ ಒಟ್ಟು 1000 ಆಟಗಾರರು ಮತ್ತು 50 ಜನ ತೀರ್ಪುಗಾರರು ಭಾಗವಹಿಸಲಿದ್ದಾರೆ. ಅಟಗಾರರೆಲ್ಲರಿಗು ಉಚಿತ ಊಟ ಉಪಚಾರ ವ್ಯವಸ್ಥೆ ಮಾಡಲಾಗಿದೆ. ಈ ಕೂಟದ ಪ್ರಶಸ್ತಿ ಮೊತ್ತ ರೂ. 3.50ಲಕ್ಷ ಅಗಿದ್ದು ಮತ್ತು ಈ ಕೂಟದ ಒಟ್ಟು ವೆಚ್ಚ ರೂ. 43.63ಲಕ್ಷ ಆಗಲಿದೆ.

ನಾವು ಈಗಾಗಲೆ ಕ್ರೀಡಾಕೂಟ ಸಮಿತಿಯನ್ನು ರಚಿಸಿ ಗೌರವ ಅಧ್ಯಕ್ಷರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಡಾ. ಜಯಮಾಲ, ಅಧ್ಯಕ್ಷರಾಗಿ ಮಣಿಪಾಲ ವಿ.ವಿ.ಯ ಸಹ ಕುಲಪತಿಗಳಾದ ಡಾ| ಎಚ್.ಎಸ್.ಬಲ್ಲಾಳ್, ಕಾರ್ಯಾಧ್ಯಕ್ಷರಾಗಿ ಉಡುಪಿ ಶಾಸಕ ಹಾಗೂ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಘುಪತಿ ಭಟ್, ಕಾರ್ಯದರ್ಶಿಯಗಿ ವೈ. ಸುಧೀರ ಕುಮಾರ, ಸಂಘಟನಾ ಕಾರ್ಯದರ್ಶಿಯಗಿ ಎಂ. ಕಾಶೀರಾಮ್ ಪೈ, ಕನ್ವೆನೊರಾಗಿ ಸೊಹೈಲ್ ಅಮಿನ್, ಜೊತೆ ಕಾರ್ಯದರ್ಶಿಯಗಿ ಅರುಣ್ ಎನ್. ಶೇರಿಗಾರ್ ಹಾಗೂ ಸಂದೀಪ ನಾಯಕ್ ಇವರನ್ನು ಆಯ್ಕೆ ಮಾಡಲಾಗಿದೆ ಹಾಗೂ ಬ್ಯಾಂಕ್ ಆಫ್ ಬರೋಡ ಈ ಪಂದ್ಯಾಕೂಟದ ಸಹ ಪ್ರಾಯೋಜಕರಾಗಿದ್ದಾರೆ.

No Comments

Leave A Comment