Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಹೊಂಡಕ್ಕೆ ಬಿದ್ದ ಬಸ್‌: 6 ಸಾವು,33 ಮಂದಿಗೆ ಗಾಯ

ರಾಂಚಿ: ಜಾರ್ಖಂಡ್‌ನ‌ ಗರ್ವ್ಹಾದ ಅನ್ನಾರಾಜ್‌ ಎಂಬಲ್ಲಿ ಮಂಗಳವಾರ ಬೆಳಗ್ಗೆ ಬಸ್ಸೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಪರಿಣಾಮ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗರ್ವಾದಿಂದ ಛತ್ತೀಸ್‌ಗಡದತ್ತ ತೆರಳುತ್ತಿದ್ದ ಬಸ್‌ ತಡೆಗೋಡೆಗೆ ಢಿಕ್ಕಿಯಾಗಿ ಹೊಂಡಕ್ಕೆ ಉರುಳಿದೆ.

ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿಲಾಗಿದೆ.

No Comments

Leave A Comment