Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಇಂದ್ರಾಳಿ ಬೆಂಕಿ ಅವಘಡ: 5.75 ಕೋ.ರೂ. ನಷ್ಟ

ಉಡುಪಿ: ರವಿವಾರ ರಾತ್ರಿ ಇಂದ್ರಾಳಿ ಎಆರ್‌ಜೆ ಆರ್ಕೆಡ್‌ನ‌ಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 5.75 ಕೋ.ರೂ. ನಷ್ಟ ಉಂಟಾಗಿದೆ ಎಂದು ಜಯದೇವ ಮೋಟಾರ್ ಸಹಿತ ಒಟ್ಟು ನಾಲ್ಕು ಮಳಿಗೆ/ಸಂಸ್ಥೆಗಳ ಮಾಲಕರು ದೂರು ನೀಡಿದ್ದಾರೆ.

ಜಯದೇವ ಮೋಟಾರ್ ಶೋ ರೂಂನಲ್ಲಿದ್ದ 11 ಬೈಕ್‌ಗಳು ಸುಟ್ಟು ಹೋಗಿವೆ. ಬಿಡಿಭಾಗಗಳ ಮಳಿಗೆ ಸಂಪೂರ್ಣ ಸುಟ್ಟಿದೆ. ಇಲ್ಲಿ ಅಂದಾಜು 5 ಕೋ.ರೂ. ನಷ್ಟ ಸಂಭವಿಸಿದೆ.

ಇದೇ ಕಟ್ಟಡದಲ್ಲಿರುವ ಎಡಿಶನ್‌ ಕ್ಲೋತ್‌ ಸ್ಟ್ರೋರ್‌ನ 10 ಲ.ರೂ. ಮೌಲ್ಯದ ಸೊತ್ತು, ಕೃಷ್ಣ ಎಂಜಿನಿಯರ್ ಕಂಪ್ಯೂಟರ್‌ ಸಂಸ್ಥೆಯ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಸಹಿ ತ 61,69,900 ರೂ. ಮೌಲ್ಯದ ಉಪಕರಣಗಳು ಸುಟ್ಟು ಹೋಗಿ ವೆ. ವೇರ್‌ ಹೌಸ್‌ಗೆ 3.50 ಲ.ರೂ. ನಷ್ಟ ಉಂಟಾಗಿದೆ ಎಂದು ದೂರು ನೀಡಲಾಗಿದೆ.

ಎಸ್‌ಪಿ ಭೇಟಿ
ಸೋಮವಾರ ಬೆಳಗ್ಗೆ ಎಸ್‌ಪಿ ನಿಶಾ ಜೇಮ್ಸ್‌ ಶೋರೂಂಗೆ ಭೇಟಿ ನೀಡಿದರು. “ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಬೆಂಕಿ ಅವಘಡ ಉಂಟಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ಮೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳು ವರದಿ ನೀಡಲಿದ್ದಾರೆ. ಅನಂತರ ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದು ಎಸ್‌ಪಿ ಪ್ರತಿಕ್ರಿಯಿಸಿದ್ದಾರೆ.

“ಮೂರೂವರೆ ತಾಸು ಕಾರ್ಯಾ ಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಶೋರೂಂನಲ್ಲಿ ಸುಮಾರು 40 ಹೊಸ ಬೈಕ್‌ಗಳಿದ್ದವು. 25 ಸ್ಕೂಟರ್‌ಗಳನ್ನು ನಮ್ಮ ಸಿಬಂದಿ ಬೇರೆಡೆಗೆ ಸಾಗಿಸಿದ್ದಾರೆ’ ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ವಸಂತ್‌ ಕುಮಾರ್‌ ತಿಳಿಸಿದ್ದಾರೆ.

No Comments

Leave A Comment