Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಗುಡಿಸಲಿಗೆ ಬೆಂಕಿ, ಪೋಷಕರ ಕಣ್ಣೆದುರಲ್ಲೇ 7ವರ್ಷದ ಮಗಳು ಸಜೀವ ದಹನ!

ಬೆಳಗಾವಿ: ದೇವರ ದೀಪ ಹಾಸಿಗೆ ಮೇಲೆ ಬಿದ್ದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 8 ವರ್ಷದ ಬಾಲಕಿ ಪೋಷಕರ ಕಣ್ಣೆದುರಲ್ಲಿಯೇ ಸಜೀವವಾಗಿ ದಹನವಾದ ಹೃದಯವಿದ್ರಾವಕ ಘಟನೆ ಬೆಳಗಾವಿ ನಗರದ ಅನಗೋಳದಲ್ಲಿ ಘಟನೆ ನಡೆದಿದೆ.

ಹೊಲದಲ್ಲಿನ ಗುಡಿಸಲಿನಲ್ಲಿ ಮಲಗಿದ್ದ ವೇಳೆ ದೇವರ ದೀಪ ಕೆಳಗೆ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು. ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ 7ವರ್ಷದ ರೇಣುಕಾ ಶರಣಪ್ಪ ಚಿಂಚಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಆದರೆ ತಂದೆ, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment