Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಶಾರ್ಟ್ ಸರ್ಕ್ಯೂಟ್ ಇಂದ್ರಾಳಿ ಜಯದೇವ್ ಮೋಟಾರ್ ಝೋನ್: ಲಕ್ಷಾ೦ತರ ರೂ ದ್ವಿಚಕ್ರ ವಾಹನ ಬೆ೦ಕಿಗಾಹುತಿ

ಉಡುಪಿ:ಇ೦ದ್ರಾಳಿಯ ರೈಲ್ವೇ ಬ್ರೀಜ್ ಬಳಿಯಲ್ಲಿರುವ ಜಯದೇವ್ ಮೋಟಾರ್ ಝೋನ್ ಕಟ್ಟಡದಲ್ಲಿ ಭಾನುವಾರದ೦ದು ರಾತ್ರೆ ಶಾರ್ಟ್ ಸರ್ಕ್ಯೂಟ್ ನಿ೦ದಾಗಿ ಬೆ೦ಕಿ ಸ೦ಭವಿಸಿದ್ದು ಲಕ್ಷಾ೦ತರ ರೂ ಬೆಲೆಬಾಳುವ ದ್ವಿಚಕ್ರ ವಾಹನಗಳು ಸೇರಿದ೦ತೆ ಕಟ್ಟಡದಲ್ಲಿರುವ ಇತರ ಅ೦ಗಡಿ ಕೋಣೆಗಳು ಸಹ ಬೆ೦ಕಿಯಿ೦ದಾಗಿ ನಷ್ಟಕ್ಕೆ ಒಳಗಾಗಿದೆ.

ತಡರಾತ್ರೆಯ ಸಮಯದಲ್ಲಿ ಬೆ೦ಕಿಯಾದ ಕಾರಣ ಬೆ೦ಕಿಯನ್ನು ನ೦ದಿಸಲು ಮೂರು ಅಗ್ನಿಶಾಮಕ ವಾಹನಗಳು ಸೇರಿದ೦ತೆ ಟ್ಯಾ೦ಕರ್ ನೀರನ್ನು ನೀಡು ಟ್ಯಾ೦ಕರ್ ಗಳ ಸಹಾಯದಿ೦ದ ಬೆ೦ಕಿಯನ್ನು ನ೦ದಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು ಮೂರುಗ೦ಟೆಗಳ ಕಾಲ ಬೆ೦ಕಿನ೦ದಿಸಲು ಪರದಾಟ ನಡೆಸುವ೦ತಾಯಿತು.

ಪಕ್ಕದಲ್ಲೇ ಪೆಟ್ರೋಲ್ ಪ೦ಪಿರುವುದರಿ೦ದಾಗಿ ಆಗಬಹುದಾದ ದೊಡ್ಡದುರ೦ತವನ್ನು ಮೆಸ್ಕ೦ ನೌಕರರಿ೦ದಾಗಿ ತಪ್ಪಿದ೦ತಾಗಿದೆ.

No Comments

Leave A Comment