Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಎಫ್ಐಎಚ್‌ ಮಹಿಳಾ ಹಾಕಿ: ಭಾರತಕ್ಕೆ ಪ್ರಶಸ್ತಿ

ಹಿರೋಶಿಮಾ (ಜಪಾನ್‌): ಭಾರತದ ವನಿತಾ ತಂಡವೂ ಎಫ್ಐಎಚ್‌ ಹಾಕಿ ಸೀರಿಸ್‌ ಫೈನಲ್ಸ್‌ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದೆ, ಬಂಗಾರದಿಂದ ಸಿಂಗಾರಗೊಂಡಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತ 3-1 ಗೋಲುಗಳ ಅಂತರದಿಂದ ಆತಿಥೇಯ ಜಪಾನ್‌ಗೆ ಆಘಾತವಿಕ್ಕಿತು.
ಡ್ರ್ಯಾಗ್‌ ಫ್ಲಿಕರ್‌ ಗುರ್ಜಿತ್‌ ಕೌರ್‌ (45 ಮತ್ತು 60ನೇ ನಿಮಿಷ) ಮತ್ತು ನಾಯಕಿ ರಾಣಿ ರಾಮ್‌ಪಾಲ್‌ (3ನೇ ನಿಮಿಷ) ಸಿಡಿಸಿದ ಗೋಲುಗಳು ಭಾರತದ ಗೆಲುವನ್ನು ಸಾರಿದವು.

ಇತ್ತೀಚೆಗೆ ಭುವನೇಶ್ವರದಲ್ಲಿ ಮುಗಿದ ಪುರುಷರ ಎಫ್ಐಎಚ್‌ ಸೀರಿಸ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿ ಕಾವನ್ನು 5-1 ಗೋಲುಗಳಿಂದ ಮಣಿಸಿ ಪ್ರಶಸ್ತಿಯನ್ನೆತ್ತಿತ್ತು.

ರಾಣಿ ಕೊಡಿಸಿದ ಮುನ್ನಡೆ
ಪಂದ್ಯದ 3ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಮೂಲಕ ರಾಣಿ ರಾಮ್‌ಪಾಲ್‌ ಗೋಲಿನ ಖಾತೆ ತೆರೆ ಯುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಈ ಆಘಾತದಿಂದ ಜಪಾನ್‌ ಬಹಳ ಬೇಗ ಚೇತರಿಸಿತು. 11ನೇ ನಿಮಿಷದಲ್ಲಿ ಕಾನೊನ್‌ ಮೊರಿ ಗೋಲು ಸಿಡಿಸಿದರು. ಇದರಿಂದ ಪಂದ್ಯ 1-1 ಸಮಬಲಕ್ಕೆ ಬಂತು.

ಗುರ್ಜಿತ್‌ ಕೌರ್‌ ಅಬ್ಬರ
ವಿಶ್ವದ 9ನೇ ಶ್ರೇಯಾಂಕಿತ ಭಾರತ ತಂಡ ಗುಣಮಟ್ಟದ ಆಟ ಪ್ರದರ್ಶಿ ಸಿತು. ಪಂದ್ಯದ 9ನೇ ನಿಮಿಷದಲ್ಲಿ ಗೋಲು ಸಾಧಿಸುವ ಅವಕಾಶ ಇತ್ತಾದರೂ ಅದು ಫೌಲ್‌ ಆಯಿತು.
ದ್ವಿತೀಯ ಕ್ವಾರ್ಟರ್‌ನಲ್ಲೂ ಭಾರತ ಉತ್ತಮ ಆಟವನ್ನೇ ಆಡಿತು. 18ನೇ ನಿಮಿಷದಲ್ಲಿ ಗೋಲು ಸಿಡಿಸುವ ಅವಕಾಶವೊಂದು ಸ್ವಲ್ಪದರಲ್ಲೇ ಮಿಸ್‌ ಆಯಿತು. ಸಮಬಲದ ಹೋರಾಟ ಜಾರಿಯಲ್ಲಿ ರುವಾಗಲೇ ಮುನ್ನುಗ್ಗಿ ಬಂದ ಗುರ್ಜಿತ್‌ ಕೌರ್‌ 45ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಭಾರತ 2-1 ಮುನ್ನಡೆ ಪಡೆಯಿತು.

ಜಪಾನ್‌ಗೆ
ಮೇಲೆ ಒತ್ತಡ ಹೆಚ್ಚಿತು. ಆದರೂ ಜಪಾನ್‌ ಬಿಡದೆ ಗೋಲಿನ ಪ್ರಯತ್ನ ನಡೆಸುತ್ತಲೇ ಇತ್ತು. ಆದರೆ ಗುರ್ಜಿತ್‌ ಕೌರ್‌ 60ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಮತ್ತೂಂದು ಗೋಲು ಸಿಡಿಸಿದರು.

No Comments

Leave A Comment