ನಾಪತ್ತೆಯಾದ 7 ಪರ್ವತಾರೋಹಿಗಳ ಶವಗಳನ್ನು ಪತ್ತೆ ಹಚ್ಚಿದ ITBP
ಪಿಥೋರ್ಗಡ: ಹಿಮಾಲಯದಲ್ಲಿ ನಾಪತ್ತೆಯಾಗಿದ್ದ 7 ಪರ್ವತಾರೋಹಿಗಳ ಶವಗಳನ್ನು ಭಾನುವಾರ ಐಟಿಬಿಪಿ ಯೋಧರ ತಂಡ ಪತ್ತೆಹಚ್ಚಿದೆ.
ನಂದಾ ದೇವಿ ಪೂರ್ವ ಪರ್ವತದ ಬಳಿ ಹೆಸರಿಲ್ಲದ ಹಿಮಪರ್ವತದಲ್ಲಿ ಹಿಮದಲ್ಲಿ ಹೂತು ಹೋಗಿದ್ದ 7 ಮಂದಿಯ ಶವಗಳನ್ನು 32 ಮಂದಿ ಯೋಧರ ತಂಡ ಪತ್ತೆ ಹಚ್ಚಿದೆ, ನಾಪತ್ತೆಯಾಗಿರುವ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
7 ಮಂದಿಯ ಪೈಕಿ ಓರ್ವ ಭಾರತೀಯ ಪರ್ವತಾರೋಹಿ ಮತ್ತು ಓರ್ವ ಮಹಿಳೆ ಸೇರಿದ್ದಾರೆ ಎಂದು ಐಟಿಬಿಪಿ ಟ್ವೀಟ್ ಮಾಡಿದೆ.
ಶವಗಳು ಪತ್ತೆಯಾದ ಸ್ಥಳದಲ್ಲಿ ಕೆಲವು ಪರ್ವತಾರೋಹಣಕ್ಕೆ ಬಳಸಲಾಗುತ್ತಿದ್ದ ಸಾಮಗ್ರಿಗಳು ಪತ್ತೆಯಾಗಿವೆ.
17,000ಅಡಿ ಎತ್ತರದಲ್ಲಿ ಶವಗಳನ್ನುಇರಿಸಲಾಗಿದ್ದುಸೋಮವಾರ ಹೆಕ್ಯಾಪ್ಟರ್ ಮೂಲಕ ಬೇಸ್ ಕ್ಯಾಂಪ್ಗೆ ತರಲಾಗುತ್ತಿದೆ.
ಪ್ರಖ್ಯಾತ ಬ್ರಿಟೀಷ್ ಪರ್ವತಾ ರೋಹಿ ಮಾರ್ಟಿನ್ ಮೊರನ್ ನೇತೃತ್ವದ 8 ಪರ್ವಾತರೋಹಿಗಳ ತಂಡ ಪಿತೋರ್ಗಡದ ನಂದಾ ದೇವಿ ಪರ್ವತದಲ್ಲಿ ನಾಪತ್ತೆಯಾಗಿದ್ದರು. ಮೇ 13 ರಂದು ಹೊರಟಿದ್ದ ತಂಡ ಮೇ 25 ರಂದು ಬೇಸ್ ಕ್ಯಾಂಪ್ಗೆ ವಾಪಾಸಾಗಬೇಕಿತ್ತು. ಜೂನ್ 13 ರಂದು ಅವರ ಪತ್ತೆಗಾಗಿ ಐಟಿಬಿಪಿ ತಂಡ ಕಾರ್ಯಾಚರಣೆ ಆರಂಭಿಸಿತ್ತು.