Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಇನ್ನೂ ಆಗದ ಕೊಳಲಗಿರಿ ಪರಾರಿ – ಶೀಂಬ್ರ ಸೇತುವೆ ಸಂಪರ್ಕ ರಸ್ತೆ: ಸಂಚಾರಕ್ಕೆ ಸಂಕಷ್ಟ

ಮಣಿಪಾಲ: ಕೊಳಲಗಿರಿ ಪರಾರಿ – ಶೀಂಬ್ರ ಸೇತುವೆ ನಿರ್ಮಾಣವಾಗಿ ಹಲವು ಸಮಯ ಕಳೆದರೂ ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣವಾಗದೇ ಇರುವುದರಿಂದ ಇದರಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ.ಸಂಚಾರ ಕಷ್ಟ ಸ್ವರ್ಣ ನದಿಗೆ ಅಡ್ಡವಾಗಿ ಈ ಸೇತುವೆ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಸಾರ್ವಜನಿಕ ವಲಯದಿಂದ ಹಲವು ವರ್ಷಗಳಿಂದ ಕೇಳಿ ಬಂದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಈ ಸೇತುವೆ ಕಾಮಗಾರಿ ನಡೆಸಲಾಗಿತ್ತು. 2018ರಲ್ಲಿಯೇ ಕಾಮಗಾರಿ ಮುಗಿದಿತ್ತು. ಆದರೆ ಸೇತುವೆಗೆ ಹೊಂದಿಕೊಂಡ ಸಂಪರ್ಕ ರಸ್ತೆ ಮಾತ್ರ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಜನರಿಗೆ ಸಂಚರಿಸುವುದು ಕಷ್ಟ ಸಾಧ್ಯವಾಗಿದೆ.

ರಸ್ತೆ ಕೆಸರುಮಯ
ಕೊಳಲಗಿರಿ, ಉಪ್ಪೂರು, ಬ್ರಹ್ಮಾವರ ಮೊದಲಾದ ಭಾಗದ ಜನರು ಮಣಿಪಾಲ ಹಾಗೂ ಈ ಮಾರ್ಗದಲ್ಲಿ ಮುಂದೆ ತೆರಳಲು ಈ ಸೇತುವೆ ಬಹಳಷ್ಟು ಅನುಕೂಲಕರವಾಗಿದ್ದು ಸಂಪರ್ಕ ರಸ್ತೆ ಸಮಸ್ಯೆ ಮಾತ್ರ ಜನರನ್ನು ಕಾಡುತ್ತಿದೆ. ರಸ್ತೆಗೆ ಡಾಮರೀಕರಣವಾಗದೇ ಇರುವುದರಿಂದ ಸುರಿದ ಮಳೆಗೆ ಮಣ್ಣು ಕುಸಿದು ರಸ್ತೆ ಕೆಸರುಮಯವಾಗಿದೆ. ಈ ರಸ್ತೆಯಲ್ಲಿ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆಗಿ ಬೀಳುವ ಸ್ಥಿತಿ ಎದುರಾಗಿದೆ.

ಸಾರ್ವಜನಿಕರ ಒತ್ತಾಯ 
ಸೇತುವೆ ನಿರ್ಮಾಣವಾಗಿ ವರ್ಷ ಕಳೆದರೂ ಸಂಪರ್ಕ ರಸ್ತೆ ಮಾತ್ರ ನಿರ್ಮಾಣವಾಗದೇ ಇರುವುದು ಈ ಭಾಗದಲ್ಲಿ ಸಂಚರಿಸಲು ಕಷ್ಟಕರವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಶೀಘ್ರವಾಗಿ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಮನವಿ ಮೂಲಕ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.

No Comments

Leave A Comment