Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

6 ವರ್ಷಗಳ ಬಳಿಕ ಮಂಗಳಾ ಕ್ರೀಡಾಂಗಣ ದರ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಯುವಜನ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಮಂಗಳಾ ಸ್ಟೇಡಿಯಂ ಶುಲ್ಕವು ಆರು ವರ್ಷಗಳ ಬಳಿಕ ಈಗ ಏರಿಕೆಯಾಗಿದೆ. ಅಗತ್ಯ ಸೌಕರ್ಯಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ.

ಮಂಗಳಾ ಒಳಾಂಗಣ ಕ್ರೀಡಾಂಗಣ ದಲ್ಲಿ ಬಾಸ್ಕೆಟ್‌ಬಾಲ್‌ ಮತ್ತು ಶಟಲ್‌ ಬ್ಯಾಡ್ಮಿಂಟನ್‌ ಕ್ರೀಡಾ ಸಂಘಟನೆಗೆ ಸರಕಾರಿ ಬಳಕೆಗೆ ಜಿಎಸ್‌ಟಿ ಒಳ ಗೊಂಡು 7,080 ರೂ., ಖಾಸಗಿಗೆ 14,160 ರೂ., ನೋಂದಾಯಿತ ಸಂಸ್ಥೆಗಳಿಂದ ನಡೆಯುವ ಕ್ರೀಡಾ ಕಾರ್ಯಕ್ರಮಗಳ ಸಂಘಟನೆಗೆ 5,310 ರೂ., ನೋಂದಣಿಯೇತರ ಸಂಸ್ಥೆಗಳ ಕಾರ್ಯಕ್ರಮಕ್ಕೆ 8,850 ರೂ.ಗೆ ಏರಿಕೆ ಮಾಡಲಾಗಿದೆ.

ಶಟಲ್‌ ಬ್ಯಾಡ್ಮಿಂಟನ್‌, ಟೇಬಲ್‌ ಟೆನ್ನಿಸ್‌ ಮತ್ತು ಬಾಸ್ಕೆಟ್‌ ಬಾಲ್‌ ಅಭ್ಯಾಸಿ ವಿದ್ಯಾರ್ಥಿಯೇತರರಿಗೆ ಮಾಸಿಕ ಶುಲ್ಕ 1,150 ರೂ., ಬೇಸಿಗೆ ತರಬೇತಿ ಶಿಬಿರ ನಡೆಸಲು ದಿನಕ್ಕೆ ಒಬ್ಬ ವಿದ್ಯಾರ್ಥಿಗೆ 350 ರೂ., ಮಂಗಳಾ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ಗೆ 750 ರೂ., ಬ್ಯಾಡ್ಮಿಂಟನ್‌ ಮಂಗ ಳೂರಿಗೆ 500 ರೂ., ಗೋಲ್ಡನ್‌ ಶಟಲ್‌ ಅಕಾಡೆಮಿಗೆ 500 ರೂ., ಮಲ್ಟಿ ಜಿಮ್‌ ವಿದ್ಯಾರ್ಥಿಗಳಿಗೆ 180 ರೂ., ಇತರರಿಗೆ 350 ರೂ. ಆಗಿದೆ.

ಅದೇ ರೀತಿ ಮಂಗಳಾ ಕ್ರೀಡಾಂಗಣದ ದರವೂ ಬದಲಾವಣೆ ಯಾಗಿದ್ದು, ಸರಕಾರಿ ಶಾಲೆ, ಕಾಲೇಜು, ಸಂಸ್ಥೆಗಳಿಗೆ 505 ರೂ., ಖಾಸಗಿ ಶಾಲೆಗಳಿಗೆ 3,540 ರೂ., ಖಾಸಗಿ ಕಾಲೇಜುಗಳಿಗೆ 8,850 ರೂ., ಖಾಸಗಿ ವೃತ್ತಿಪರ ಕಾಲೇಜು, ಖಾಸಗಿ ವಿವಿಗಳಿಗೆ 17,700 ರೂ., ಖಾಸಗಿ ಸಂಸ್ಥೆಗಳ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳಿಗೆ 8,850 ರೂ.ಗೆ ಏರಿಕೆ ಮಾಡಲಾಗಿದೆ. ಹೊರಾಂಗಣ ವೇದಿಕೆಗೆ 5,900 ರೂ., ಖಾಸಗಿ ಸಂಸ್ಥೆಗಳ ವಸ್ತು ಪ್ರದರ್ಶನಕ್ಕೆ 60 ಸಾವಿರ ರೂ., ಕರಾವಳಿ ಉತ್ಸವ ಮತ್ತು ಇತರ ಸೀಮಿತ ಅವಧಿಯ ಕಾರ್ಯಕ್ರಮಗಳಿಗೆ 23,600 ರೂ. ಮತ್ತು ಕರಾವಳಿ ಮೈದಾನ ವಾಲಿಬಾಲ್‌ ಗ್ರೌಂಡ್‌ 1,770 ರೂ.ಗೆ ಏರಿಸಲಾಗಿದೆ.

ಅಗತ್ಯ ಸೌಕರ್ಯಗಳ ದರ ಮತ್ತು ಸಿಬಂದಿ ದರ ಏರಿಕೆಯಾಗಿದೆ. ಕಡಿಮೆ ಖರ್ಚಿನಲ್ಲಿ ಮಂಗಳಾ ಕ್ರೀಡಾಂಗಣದ ನಿರ್ವಹಣೆ ಸಾಧ್ಯವಿಲ್ಲ. ಅಲ್ಲದೆ ಕಳೆದ ಆರು ವರ್ಷಗಳಿಂದ ದರದಲ್ಲಿ ಏರಿಕೆಯಾಗಿರಲಿಲ್ಲ.
– ಪ್ರದೀಪ್‌ ಡಿ’ಸೋಜಾ, ದ.ಕ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಉಪನಿರ್ದೇಶಕ

No Comments

Leave A Comment