Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ನಾಲ್ವರು ಸರ್ಕಾರಿ ಅಧಿಕಾರಿಗಳ ಕಚೇರಿಯ ಮೇಲೆ ಎಸಿಬಿ ದಾಳಿ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ರಾಜ್ಯದ ನಾಲ್ವರು ಅಧಿಕಾರಿಗಳ ಕಚೇರಿಯ ಮೇಲೆ ದಾಳಿ ಮಾಡಿದೆ.

ನಾಲ್ಕು ಅಧಿಕಾರಿಗಳಿಗೆ ಸೇರಿದ ಆಸ್ತಿ ಮತ್ತು ಕಚೇರಿಗಳ ಮೇಲೆ 14 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ನಿಗದಿತ ಆದಾಯ ಮೀರಿದ ಆಸ್ತಿ ಪಾಸ್ತಿ, ಸಂಪತ್ತು ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.

ವಾಣಿಜ್ಯ ತೆರಿಗೆ ಜಂಟಿ ಆಯುಕ್ತ, ವಿಭಾಗೀಯ ಸರಕು ಮತ್ತು ಸೇವಾ ಕಚೇರಿಯ ಎಂ.ಬಿ.ನಾರಾಯಣಸ್ವಾಮಿ, ಡಾ.ಶಿವಶಂಕರ್, ಹೆಚ್ಚುವರಿ ನಿರ್ದೇಶಕ, ಬೆಂಗಳೂರು ಹಾಲು ಒಕ್ಕೂಟ, ರಾಮನಗರ ಜಿಲ್ಲೆ , ಅರ್ಷದ್ ಪಾಷಾ ,ಸಹಾಯಕ ಸೂಪರಿಡೆಂಟ್ ಪಂಚಾಯತ್ ರಾಜ್ ಇಲಾಖೆ,  ಹಾಸನ ಉಪವಿಭಾಗದ ಪಿಡಬ್ಲ್ಯುಡಿ ಸಹಾಯಕ ಅಧೀಕ್ಷಕ ಎಚ್.ಎಸ್.ಚನ್ನೇಗೌಡ. ದಾಳಿಗೆ ಒಳಗಾದ ಅಧಿಕಾರಿಗಳಾಗಿದ್ದಾರೆ. ದಾಳಿ ಮತ್ತು ದಾಖಲಾತಿ ಪರಿಶೀಲನೆ ಮುಂದುವರಿದಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

No Comments

Leave A Comment