Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಬ್ರಿಟಿಷ್ ಹೆರಾಲ್ಡ್ ಓದುಗರ ಸಮೀಕ್ಷೆ;ಪ್ರಧಾನಿ ಮೋದಿ ಮುಡಿಗೆ ವಿಶ್ವದ ಪ್ರಭಾವಿ ನಾಯಕನ ಕಿರೀಟ

ಲಂಡನ್: ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದ್ದು, ಇಂಗ್ಲೆಂಡ್ ಮೂಲದ ಪ್ರತಿಷ್ಠಿತ ಬ್ರಿಟಿಷ್ ಮ್ಯಾಗಜೀನ್ 2019ರಲ್ಲಿ ನಡೆಸಿದ್ದ ಓದುಗರ ಸಮೀಕ್ಷೆಯಲ್ಲಿ ವಿಶ್ವದ ಹಲವು ನಾಯಕರನ್ನು ಹಿಂದಿಕ್ಕಿರುವ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿರುವುದಾಗಿ ವರದಿ ತಿಳಿಸಿದೆ.

ಬ್ರಿಟಿಷ್ ಹೆರಾಲ್ಡ್ ಆಯೋಜಿಸಿದ್ದ ಈ ಸಮೀಕ್ಷೆ ಶನಿವಾರ ಮಧ್ಯರಾತ್ರಿ ಮುಕ್ತಾಯಕಂಡಿತ್ತು. ಹೆರಾಲ್ಡ್ ವರದಿ ಪ್ರಕಾರ, ಜಗತ್ತಿನ ಹಲವು ನಾಯಕರು, ರಾಜಕೀಯ ಮುಖಂಡರನ್ನು ಸೋಲಿಸಿದ್ದು, ಮೋದಿ ಅವರನ್ನು ವಿಶ್ವನಾಯಕ ಎಂದು ಜಯಗಳಿಸಿರುವುದಾಗಿ ಘೋಷಿಸಿದೆ.

ವಿಶ್ವದ ಪ್ರಭಾವಿ ನಾಯಕರ ಈ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶೇ.30.9ರಷ್ಟು ಮತ ಪಡೆದಿದ್ದರೆ, ರಷ್ಯಾದ ವ್ಲಾಡಿಮಿರ್ ಪುಟಿನ್ ಶೇ.29.9ರಷ್ಟು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.21.9ರಷ್ಟು ಹಾಗೂ ಚೀನಾದ ಕ್ಸಿ ಜಿಂಗ್ ಪಿಂಗ್ ಶೇ.18.01ರಷ್ಟು ಮತ ಪಡೆದಿರುವುದಾಗಿ ವರದಿ ವಿವರಿಸಿದೆ.

ಬ್ರಿಟಿಷ್ ಹೆರಾಲ್ಡ್ ಆಯೋಜಿಸಿದ್ದ ಓದುಗರ ಸಮೀಕ್ಷೆ ವಿಶ್ವದ 25 ನಾಯಕರನ್ನು ಆಯ್ಕೆ ಮಾಡಲಾಗಿದ್ದು, ಅಂತಿಮವಾಗಿ ನಾಲ್ಕು ನಾಯಕರನ್ನು ತಜ್ಞರ ಸಮಿತಿ ಆಯ್ಕೆ ಮಾಡಿತ್ತು ಎಂದು ವರದಿ ತಿಳಿಸಿದೆ.

ಬ್ರಿಟಿಷ್ ಹೆರಾಲ್ಡ್ ಓದುಗರು ಕಡ್ಡಾಯ ಓಡಿಪಿ(ಒನ್ ಟೈಮ್ ಪಾಸ್ ವರ್ಡ್) ಮೂಲಕ ಮತ ಚಲಾಯಿಸಬೇಕೆಂದು ಸೂಚಿಸಿತ್ತು. ಅಚ್ಚರಿ ಎಂಬಂತೆ ತಮ್ಮ ಇಷ್ಟದ ನಾಯಕನಿಗೆ ಓದುಗರು ಏಕಕಾಲದಲ್ಲಿ ಮತ ಚಲಾಯಿಸಲು ಮುಗಿಬಿದ್ದಿದ್ದರಿಂದ ಬ್ರಿಟಿಷ್ ಮ್ಯಾಗಜಿನ್ ವೆಬ್ ಸೈಟ್ ಕ್ರ್ಯಾಶ್ ಆಗಿರುವುದಾಗಿ ತಿಳಿಸಿದೆ.

No Comments

Leave A Comment