Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಶಾಂತಿ,ಸಮೃದ್ಧಿ ಮತ್ತು ಸಾಮರಸ್ಯ ಉತ್ತೇಜಿಸುವುದು ಯೋಗದ ಗುರಿ

ರಾಂಚಿ : ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವುದು ಯೋಗದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಂಚಿಯಲ್ಲಿ ಶುಕ್ರವಾರ ನಡೆದ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ಯೋಗವನ್ನು ಒಪ್ಪಿಕೊಂಡ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲರೂ ಯೋಗವನ್ನು ಅಪ್ಪಿಕೊಳ್ಳಬೇಕಾಗಿದೆ. ಯೋಗಾ ಯಾವಾಗಲೂ ಶಾಂತಿ ಮತ್ತು ಸಹಬಾಳ್ವೆಗೆ ಸಹಕಾರಿಯಾಗಲಿದೆ ಎಂದರು.

ಯೋಗಜಾತಿ, ಧರ್ಮದ ಎಲ್ಲೆಯನ್ನು ಮೀರಿದ್ದಾಗಿದೆ. ಯೋಗದ ಮೂಲಕ ಮದ್ಯ ಮುಕ್ತವಾಗಲೂ, ಡಯಾಬಿಟಿಸ್‌ಗೂ ಪರಿಹಾರ ಪಡೆದುಕೊಳ್ಳಬಹುದು ಎಂದರು.

ಇಂದಿನ ಯುವ ಜನತೆಯಲ್ಲಿ ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಯೋಗದ ಮೂಲಕ ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಯೋಗವನ್ನು ರೋಗ ತಡೆಗಟ್ಟುವ ಶಕ್ತಯನ್ನಾಗಿಸಬೇಕು ಎಂದರು.

30 ಸಾವಿರ ಮಂದಿ ರಾಂಚಿಯ ಪ್ರಭಾತ್‌ ತಾರಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯೋಗಾಸನಗಳನ್ನು ಮಾಡಿದರು.

ಯೋಗ ದಿನಾಚರಣೆ ಆಚರಿಸುತ್ತಿರುವ ವಿಶ್ವದ ಎಲ್ಲರಿಗೂ ಈ ವೇಳೆ ಧನ್ಯವಾದ ಸಲ್ಲಿಸಿದರು. ಕೆಲ ಹೊತ್ತು ಇಂಗ್ಲೀಷ್‌ನಲ್ಲಿ ಭಾಷಣ ಮಾಡಿ ಧನ್ಯವಾದ ಸಲ್ಲಿಸಿದರು.

No Comments

Leave A Comment