Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಟ್ಯಾಂಕರ್‌ – ಟ್ರ್ಯಾಕ್ಟರ್‌ ಢಿಕ್ಕಿ: ಆರು ಮಂದಿಯ ದಾರುಣ ಸಾವು; 15 ಮಂದಿಗೆ ಗಾಯ

ಸೀತಾಪುರ, ಉತ್ತರ ಪ್ರದೇಶ : ಸೀತಾಪುರ-ಲಖೀಂ ಪುರ ಹೈವೇಯಲ್ಲಿ ಟ್ಯಾಂಕರ್‌ ಮತ್ತು ಟ್ರ್ಯಾಕ್ಟರ್‌ ಢಿಕ್ಕಿಯಾದ ಭೀಕರ ಅವಘಡದಲ್ಲಿ ಆರು ಮಂದಿ ಮೃತಪಟ್ಟು ಇತರ 15 ಮಂದಿ ಗಾಯಗೊಂಡು ಘಟನೆ ವರದಿಯಾಗಿದೆ.

ಸೀತಾಪುರ ನಗರದ ಟೇಡ್ವಾ ಚಿಲೋಲಾ ಎಂಬಲ್ಲಿ ಈ ಅವಘಡ ನಿನ್ನೆ ಸೋಮವಾರ ತಡ ರಾತ್ರಿ ಸಂಭವಿಸಿತು. ಟ್ರ್ಯಾಕ್ಟರ್‌ನಲ್ಲಿದ್ದ ಗ್ರಾಮಸ್ಥರು ಮದುವೆ ಸಮಾರಂಭಕ್ಕೆ ಹೋಗುತ್ತಿದ್ದರು ಎಂದು ಎಡಿಎಂ ವಿನಯ್‌ ಪಾಠಕ್‌ ತಿಳಿಸಿದ್ದಾರೆ.

ಮೃತರನ್ನು ಅನಿಲ್‌ 30, ವಿನೋದ್‌ 36, ತೇಜ್‌ಪಾಲ್‌ 32, ಛೋಟೇಲಾಲ್‌ 35, ಅಂಕಿತ್‌ 24 ಮತ್ತು ಟ್ರ್ಯಾಕ್ಟರ್‌ ಚಾಲಕ ಛೋಟಾ 21 ಎಂದು ಗುರುತಿಸಲಾಗಿದೆ.

ಇತರ 15 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಟ್ಯಾಂಕರ್‌ ಚಾಲಕನನ್ನು ಬಂಧಿಸಿದ್ದಾರೆ. ಕೋತ್ವಾಲಿ ಸೀತಾಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment