Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ತಲ್ವಾರ್ ಪೇಟೆ ಚಿತ್ರದಲ್ಲಿ ವಸಿಷ್ಠ ಸಿಂಹಗೆ ಜೋಡಿಯಾಗಿ ಪಂಚತಂತ್ರ ಬೆಡಗಿ!

ಯೋಗರಾಜ್ ಭಟ್ಟರ ಪಂಚತಂತ್ರದಲ್ಲಿ ಅಭಿನಯಿಸಿದ್ದ ಸೋನಾಲ್ ಮಂಟೋರಿಯಾ ಇದೀಗ ವಸಿಷ್ಠ ಸಿಂಹ ಅಭಿನಯದ ತಲ್ವಾರ್ ಪೇಟೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪಂಚತಂತ್ರ ಬಳಿಕ ಇದೀಗ ಬುದ್ಧಿವಂತ 2 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸೋನಲ್ ನಂತರ ಯೋಗರಾಜ್ ಭಟ್ ರ ಗಾಳಿಪಟ 2 ಚಿತ್ರದಲ್ಲಿ ನಟಿಸಲಿದ್ದಾರೆ. ಈ ಮಧ್ಯೆ ತಲ್ವಾರ್ ಪೇಟೆ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ರಾಮ್ ಲಕ್ಷ್ಮಣ್ ಎಂಬುವರು ಕಥೆ, ಚಿತ್ರಕಥೆ  ಮತ್ತು ಸಂಭಾಷಣೆ ಜೊತೆಗೆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಂದ ಕುಮಾರ್ ಛಾಯಾಗ್ರಹಣ. ಹರ್ಷವರ್ಷನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಜುಲೈನಲ್ಲಿ ಚಿತ್ರ ಸೆಟ್ಟೇರಲಿದೆ.

No Comments

Leave A Comment