Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಉಡುಪಿ: ಬಜೆ ಡ್ಯಾಂನತ್ತ ಹರಿಯುತ್ತಿಲ್ಲ ನೀರು

ಉಡುಪಿ: ಮುಂಗಾರು ಬಲಗೊಂಡಿಲ್ಲದ ಕಾರಣ ದಿನ ಬಿಟ್ಟು ದಿನ ಸಾಧಾರಣ ಮಳೆಯಾಗುತ್ತಿದೆ. ಸ್ವರ್ಣಾ ನದಿಯಲ್ಲಿ ಶನಿವಾರ ಮುಂಡ್ಲಿ ಡ್ಯಾಂನಿಂದ ನೀರಿನ ಹರಿವು ಆರಂಭವಾಗಿದ್ದು, ನಿಧಾನವಾಗಿ ಶಿರೂರು ಡ್ಯಾಂನತ್ತ ಹರಿದು ಬರುತ್ತಿದೆ.

ಈ ಹಿಂದೆ ಮುಂಡ್ಲಿ ಡ್ಯಾಂ ತುಂಬಿದ ಒಂದೆರಡು ದಿನಗಳೊಳಗೆ ಬಜೆ ಡ್ಯಾಂನತ್ತ ನೀರು ಹರಿದು ತುಂಬುತ್ತಿತ್ತು. ಆದರೆ ಈ ಬಾರಿ ತುಂಬಾ ವಿಳಂಬವಾಗಿದೆ. ಆದರೂ ಶಿರೂರಿನಿಂದ ಬಜೆ ಡ್ಯಾಂತನಕ ನೀರು ಹರಿದು ಬರುವ ವರೆಗೆ ಪಂಪಿಂಗ್‌ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆನೀರು ಸಂಗ್ರಹಣೆಯಿಂದಾಗಿ ಡ್ಯಾಂನಲ್ಲಿ ಪ್ರಸ್ತುತ 1.70 ಅಡಿಯಷ್ಟು ನೀರು ಮಾತ್ರ ಲಭ್ಯವಿದೆ. ಇಷ್ಟೊಂದು ನಿಧಾನಕ್ಕೆ ನೀರಿನ ಹರಿವು ಇರುವುದು ಇದುವರೆಗೆ ಕಂಡಿಲ್ಲ ಎಂದು ಸ್ಥಳೀಯರು ತಿಳಿಸುತ್ತಾರೆ.

ಪಂಪಿಂಗ್‌
ಪುತ್ತಿಗೆ ದೇವಸ್ಥಾನ, ಮಠ ಮತ್ತು ದೇವಸ್ಥಾನ ಹಾಗೂ ಮಠದ ಮಧ್ಯಭಾಗದಲ್ಲಿ ಒಟ್ಟು 4 ಪಂಪ್‌ಗ್ಳನ್ನು ಬಳಸಿ ಪಂಪಿಂಗ್‌ ಮಾಡಲಾಗುತ್ತಿದೆ. ಸೋಮವಾರವೂ ಪಂಪಿಂಗ್‌ ಮುಂದುವರಿಯಲಿದೆ. ನೀರು ಹರಿದು ಬಜೆ ಡ್ಯಾಂ ತುಂಬುವ ತನಕ ಪಂಪಿಂಗ್‌ ನಡೆಯಲಿದೆ.

ಹರಿವು ನಿಧಾನ
ಜೂನ್‌ ತಿಂಗಳ ಅರ್ಧಾಂಶ ಕಳೆಯುತ್ತಿದ್ದರೂ ನೀರಿನ ಹರಿವು ಆರಂಭ ವಾಗದಿರುವುದು ಅಚ್ಚರಿ, ಆತಂಕಕ್ಕೆ ಕಾರಣವಾಗಿದೆ. ಕಳೆದ ಬಾರಿ ಈ ಸಮಯದಲ್ಲಿ ನೀರಿನ ಹೊರಹರಿವು ಆರಂಭವಾಗಿತ್ತು. ಆದರೆ ಈ ಬಾರಿ ಮುಂಡ್ಲಿಯಿಂದ ಶಿರೂರಿಗೆ ನೀರು ಹರಿದು ಬರಲು ಎರಡು ದಿನ ತಗಲಿದೆ. ಡ್ಯಾಂನತ್ತ ಸರಾಗವಾಗಿ ನೀರು ಹರಿದು ಬರಲು ಧಾರಾಕಾರ ಮಳೆ ಬಂದರೆ ಒಂದು ದಿನ ಸಾಕಾಗಬಹುದು ಎಂದು ಅಧಿಕಾರಿಗಳು ತಿಳಿಸುತ್ತಾರೆ.

No Comments

Leave A Comment