Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಜೂನ್ 30ರಂದು ಮಂಗಳೂರು ಗಾಟ್ ಟ್ಯಾಲೆಂಟ್ ಮತ್ತು ಆರ್ಟಿಸ್ತ್ರೀ 2019

ಮಂಗಳೂರು: ಕರಾವಳಿಯ ಯುವ ಪ್ರತಿಭೆಗಳಿಗೆ ಹೊಸ ಅವಕಾಶ. ಡ್ರೀಮ್ ಕ್ಯಾಚರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರು ಗಾಟ್ ಟ್ಯಾಲೆಂಟ್ – ಸೀಸನ್ 1 ಮತ್ತು ವಿಶೇಷ ಪ್ರತಿಭೆಯ ಯುವತಿಯರಿಗೆ ಆರ್ಟಿಸ್ತ್ರೀ – 2019 ಇದೇ ಬರುವ ಜೂನ್ 30ರಂದು ಮಂಗಳೂರಿನ ಫೋರಂ ಫೀಝ ಮಾಲ್ ನಲ್ಲಿ ನಡೆಯಲಿದೆ.

ಕರಾವಳಿಯ ಯುವ ಪ್ರತಿಭಾವಂತರಿಗೆ ಅವಕಾಶ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಡ್ರೀಮ್ ಕ್ಯಾಚರ್ಸ್ ಇವೆಂಟ್ಸ್ ಮಂಗಳೂರಿನಲ್ಲಿ ಈ ಉತ್ತಮ ವೇದಿಕೆ ನೀಡುತ್ತಿದೆ.

ಈ ವೇದಿಕೆಯಲ್ಲಿ ಮ್ಯೂಸಿಷಿಯನ್, ಡ್ಯಾನ್ಸರ್ಸ್, ಸಿಂಗರ್ಸ್, ರಾಪರ್ಸ್ , ಆಕ್ಟರ್ಸ್, ಆರ್ಟಿಸ್ಟ್, ಕಾಮೆಡಿಯನ್ಸ್,ಮ್ಯಾಜಿಷಿಯನ್ಸ್ ಇತ್ಯಾದಿ ಪ್ರತಿಭೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ.

ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕಿಸಿ 8884410414 – 8884409014

No Comments

Leave A Comment