Log In
BREAKING NEWS >
ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನೇರಪ್ರಸಾರ ಕಾರ್ಯಕ್ರಮಕ್ಕೆ ಸಹಕರಿಸಿದ ದೇವಸ್ಥಾನದ ಆಡಳಿತ ಮ೦ಡಳಿಗೆ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯವರಿಗೆ ಮತ್ತು ಜಾಹೀರಾತನ್ನು ನೀಡಿ ಸಹರಿಸಿದ ಎಲ್ಲಾ ಜಾಹೀರಾತುದಾರರಿಗೆ ಕರಾವಳಿ ಕಿರಣ ಡಾಟ್ ಬಳಗದ ವತಿಯಿ೦ದ ಧನ್ಯವಾದಗಳು ಹಾಗೂ ಏಳುದಿನಗಳ ನಮ್ಮ ಅ೦ತರ್ಜಾಲ ಪತ್ರಿಕೆಯನ್ನು ವೀಕ್ಷಿಸಿದ ಎಲ್ಲಾ ಓದುಗರಿಗೆ,ಅಭಿಮಾನಿಗಳಿಗೆ ಅಭಿನ೦ದನೆಗಳನ್ನು ಸಲ್ಲಿಸುತ್ತೇವೆ.

ಮಲ್ಪೆ ಬೀಚ್‌ ಸಮುದ್ರ ತೀರಕ್ಕೆ ಬಿತ್ತು ತಡೆಬೇಲಿ

ಮಲ್ಪೆ: ಆಕರ್ಷಣೀಯ ತಾಣ ಮಲ್ಪೆ ಬೀಚ್‌. ಈ ಕಾರಣಕ್ಕೆ ಇಲ್ಲಿಗೆ ಮಳೆಗಾಲದಲ್ಲೂ ಹೊರರಾಜ್ಯ, ಹೊರಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಮಳೆಗಾಲದಲ್ಲಿ ತೆರೆಗಳ ಅಬ್ಬರ ಜೋರಾಗಿದ್ದು ಸಮುದ್ರಕ್ಕೆ ಇಳಿಯುವುದು, ನೀರಿನಲ್ಲಿ ಆಟವಾಡುವುದು ಹೆಚ್ಚು ಅಪಾಯಕಾರಿ.

ಎಚ್ಚರಿಕೆಯ ನಡುವೆಯೂ ಪ್ರವಾಸಿಗರು ನೀರಿಗಿಳಿಯಲು ಮುಂದಾಗುತ್ತಾರೆ. ಅವರನ್ನುತಡೆಯಲು ಬೀಚ್‌ ಸಿಬಂದಿ ಹರಸಾಹಸ ಪಡುವ ಸ್ಥಿತಿ ಇದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ.

ಕೆಂಪು ಬಾವುಟ, ತಡೆಬೇಲಿ 
ಬೀಚ್‌ ಅಭಿವೃದ್ಧಿ ಸಮಿತಿಯ ವತಿಯಿಂದ ಕೆಂಪು ಬಾವುಟ, ಬಲೆಯ ತಡೆಬೇಲಿಯನ್ನು ಕಟ್ಟಿ ಪ್ರವಾಸಿಗರು ನೀರಿಗಿಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಸಮುದ್ರ ತೀರದಿಂದ ಸುಮಾರು 15 ಅಡಿಗಳಷ್ಟು ದೂರದಲ್ಲಿ ಬೀಚ್‌ನ ಉದ್ದಕ್ಕೂ 7ಅಡಿ ಎತ್ತರದಲ್ಲಿ ನೆಟ್‌ ಬಳಸಿ ತಡೆಬೇಲಿ ಹಾಕಲಾಗಿದೆ. ಸಮುದ್ರದ ವಾತಾವರಣವನ್ನು ನೋಡಿಕೊಂಡು ಆಗಸ್ಟ್‌ ಕೊನೆಯ ವಾರ ಅಥವಾ ಸೆಪ್ಟಂಬರ್‌ ಪ್ರಥಮ ವಾರ ತಡೆಬೇಲಿತೆರವುಗೊಳಿಸಿ ಹಳದಿ ಬಾವುಟವನ್ನು ಹಾಕಲಾಗುತ್ತದೆ. ಆ ಬಳಿಕ ಸಮುದ್ರಕ್ಕೆ ಇಳಿಯಬಹುದಾಗಿದೆ.
ಹೆಚ್ಚುವರಿ ಸಿಬಂದಿ ಪ್ರಸ್ತುತ ಮಲ್ಪೆ ಬೀಚ್‌ನಲ್ಲಿ 6 ಮಂದಿ ಜೀವರಕ್ಷಕರು, 3 ಮಂದಿ ಹೋಮ್‌ಗಾರ್ಡ್‌ ಇದ್ದು ಮಳೆಗಾಲದಲ್ಲಿ 8 ಮಂದಿ ಜೀವರಕ್ಷಕರು, 6 ಮಂದಿ ಹೋಮ್‌ ಗಾರ್ಡ್‌ಗಳು ಕಾರ್ಯಚರಿಸಲಿದ್ದಾರೆ. ರಕ್ಷಣೆ ಪರಿಕರಗಳನ್ನು ಹೆಚ್ಚಿಸಲಾಗಿದೆ. ಮಳೆಗಾಲ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಪದೇ ಪದೇ ಸೂಚನೆ ನೀಡಲಾಗುತ್ತಿದೆ. ಸೂಚನೆಯನ್ನು ಮೀರಿ ನೀರಿಗಿಳಿದು ಪ್ರವಾಸಿಗರು ಅಪಾಯಕ್ಕೆ ಸಿಲುಕುತ್ತಾರೆ ಎನ್ನುತ್ತಾರೆ ಇಲ್ಲಿನ ಜೀವರಕ್ಷಕ ತಂಡದವರು.

ಪ್ರವಾಸಿಗರ ಸಹಕಾರ ಬೇಕು
ಮಳೆಗಾಲ ಬಳಿಕ ಸಮುದ್ರ ಸಹಜ ಸ್ಥಿತಿಗೆ ಬರುವವರೆಗೆ ಪ್ರವಾಸಿಗರು ಸಮುದ್ರ ತೀರದತ್ತ ತೆರಳಲು ಅವಕಾಶ ಇದ್ದರೂ ನೀರಿಗಿಳಿಯುವಂತಿಲ್ಲ. ಯಾವುದೇ ಅಫಘಾತಗಳು ಸಂಭವಿಸದಂತೆ ಎಚ್ಚರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿಗರು ನಮ್ಮೊಂದಿಗೆ ಕೈ ಜೋಡಿಸಬೇಕಾಗಿದೆ.
ಸುದೇಶ್‌ ಶೆಟ್ಟಿ, 
ಬೀಚ್‌ ನಿರ್ವಾಹಕರು

No Comments

Leave A Comment